ಕುಂದಾಪುರ :(ಏ. 10): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ‘ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 4 ‘ ಎರಡನೇ ದಿನವಾದ ಗುರುವಾರದಂದು ಶಿಬಿರಾರ್ಥಿಗಳು ಕೆರಾಡಿಯ ಮೂಡುಗಲ್ಲಿನ ಶ್ರೀ ಕೇಶವನಾತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಅಲ್ಲಿ ಬೆಟ್ಟದ ತಪ್ಪಲಿನಲ್ಲಿರುವ ಗುಹೆಯ ನೀರಿನಲ್ಲಿ ನಡೆದುಕೊಂಡು ಹೋಗಿ ದೇವರ ದರ್ಶನವನ್ನು ಪಡೆದರು. ಅಲ್ಲಿಯೇ ರಗೋಲಿ, ಚೆನ್ನೆಮಣೆ ಮುಂತಾದ ಗ್ರಾಮೀಣ ಕ್ರೀಡೆಗಳನ್ನಾಡಿ ಸಂಭ್ರಮಿಸಿದರು. ತದನಂತರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದರ ಮೂಲಕ ದಿನದ ಶಿಬಿರ ಸಂಪನ್ನಗೊಂಡಿತು.












