ಕುಂದಾಪುರ ( ಫೆ.15) : ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಆದರ್ಶ್ ಆಸ್ಫತ್ರೆ ಕುಂದಾಪುರ,ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಕುಂದಾಪುರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಇವರ ಸಹಯೋಗದಲ್ಲಿ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಫೆಬ್ರವರಿ 14ರಂದು ಆದರ್ಶ ಆಸ್ಫತ್ರೆ ಕುಂದಾಪುರದಲ್ಲಿ ಸ್ವಯಂ ಪ್ರೆರೀತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರವನ್ನು ಸಾರ್ವಜನಿಕ ಆಸ್ಫತ್ರೆ ಕುಂದಾಪುರ ಇದರ ವೈದ್ಯರಾದ ಡಾ. ಶ್ರಿ ನಾಗೇಶ್ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಡಾ. ಶ್ರೀ ಆದರ್ಶ ಹೆಬ್ಬಾರ್, ಆದರ್ಶ ಆಸ್ಫತ್ರೆ ಕುಂದಾಪುರ ಇವರು ವಹಿಸಿದ್ದರು, ಮುಖ್ಯ ಅಥಿತಿಗಳಾಗಿ, ಶ್ರೀ ಬಾಲಕೃಷ್ಣ ಮುದ್ದೊಡಿ, ಪ್ರಾಧ್ಯಾಪಕರು MIT ಮಣಿಪಾಲ, ಬಳ್ಕೂರು ಗೋಪಾಲ ಆಚಾರ್ಯ, ಪ್ರವರ್ತಕರು ಮಾತ್ರಶ್ರೀ ಸೇವಾ ಸಂಘ ಮಣಿಪಾಲ, ಶ್ರೀ ವಿಶ್ವನಾಥ್ ಮೊಗವೀರ, ಗ್ರಾಮ ಪಂಚಾಯತ್ ಸದಸ್ಯರು ಬೀಜಾಡಿ, ಗೌರವಾಧ್ಯಕ್ಷರು ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ, ಶ್ರೀ ಮನೋಜ್ ಪುತ್ರನ್ಮಲ್ಪೆ, HDFC Bank ಮಂಗಳೂರು, ಶ್ರೀ ಸತೀಶ್ ಸಾಲಿಯಾನ್, ಸಂಸ್ಥಾಪಕ ಅಧ್ಯಕ್ಷರು ಅಭಯಹಸ್ತ, ಶ್ರೀ ವಿಜಯೇಂದ್ರ, ಇಂಡಿಯನ್ ರೆಡಕ್ರಾಸ್ ಕುಂದಾಪುರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೇರವೇರಿತು.
ಯೋಧ ಶ್ರೀ ಕರುಣಾಕರ ಗಾಣಿಗ, ರಕ್ತದಾನಿ ಹಾಗೂ ಮೈಕ್ ಪ್ರಚಾರಕರಾದ ಶ್ರೀ ಸುರೇಂದ್ರ ಕಾಂಚನ್, ಜೈ ಕುಂದಾಪ್ರ್ ಸೇವಾಟ್ರಸ್ಟ್ (ರಿ) ಸಂಸ್ಥಾಪಕ-ರಕ್ತದಾನಿ ಶ್ರಿ ಪುಂಡಲೀಕ ಮೊಗವೀರ, ಟ್ರಸ್ಟ್ ಕಾರ್ಯದರ್ಶಿ-ರಕ್ತದಾನಿ ಶ್ರೀ ಜಯರಾಜ್ ಸಾಲಿಯಾನ್ ರನ್ನು ಸನ್ಮಾನಿಸಲಾಯಿತು. ತದ ನಂತರ ಅತಿಥಿಗಳಿಂದ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆಯ ಟೀ ಶರ್ಟ್ ಅನಾವರಣ ಗೊಳಿಸಲಾಯಿತು.
ಒಟ್ಟು 84 ಯುನಿಟ್ ರಕ್ತವನ್ನು ಶಿಬಿರದಲ್ಲಿ ಸಂಗ್ರಹಿಸಲಾಯಿತು. ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೀ ಸತೀಶ್ ಸಾಲಿಯಾನ್ ವಂದಿಸಿದರು. ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ ಮೊಗವೀರ ನಿರೂಪಿಸಿದರು.














