ಕೊಲ್ಲೂರು ( ಜು 15): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪಿ ಯು ಕಾಲೇಜಿನ 2025-26 ನೇ ಶೈಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 44 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಕಾಲೇಜಿನ ಮೇಲುಸ್ತುವಾರಿಗಳು ಆಗಿರುವ ಸುರೇಂದ್ರ ಶೆಟ್ಟಿ ಯವರು ಎಲ್ಲಾ ವಿದ್ಯಾರ್ಥಿಗಳಿಗೆ ಮೂಕಾಂಬಿಕೆಯ ನಾಣ್ಯ ನೀಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿನ ದಿನಗಳಲ್ಲಿಯೂ ಇದೆ ರೀತಿ ಸಾಧನೆ ಮಾಡಬೇಕು ನಿಮಗೆ ದೇವಸ್ಥಾನ ಹಾಗೂ ವೈಯಕ್ತಿಕವಾಗಿ ಪ್ರೋತ್ಸಾಹವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ, ಬಿ . ಸ್ವಾಗತಿಸಿದರು ,ಗಣಕ ಶಾಸ್ತ್ರ ಉಪನ್ಯಾಸಕ ರಾಮ ನಾಯ್ಕ ಕೆ ಬಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು ಕನ್ನಡ ಉಪಸ್ಯಾಸಕ ವಾಸುದೇವ ಉಡುಪ ಪ್ರಸ್ತಾವಿಕ ಮಾತುಗಳನ್ನಾಡಿದರು ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತಿ ಶೆಟ್ಟಿ ನಿರೂಪಿಸಿ ಸಮಾಜ ಶಾಸ್ತ್ರ ಉಪನ್ಯಾಸಕ ನಾಗರಾಜ್ ಅಡಿಗ ವಂದಿಸಿದರು










