ಕಾರ್ಕಳ( ಜೂ ,18): 2026-27ನೇ ಸಾಲಿನ JOSAA ಕೌನ್ಸೆಲಿಂಗ್ನ ಮೊದಲ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 26 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾರೆ.

ಆಯ್ಕೆಯಾದವರಲ್ಲಿ 4 ವಿದ್ಯಾರ್ಥಿಗಳು ಐ.ಐ.ಟಿ, 9 ವಿದ್ಯಾರ್ಥಿಗಳು ಎನ್.ಐ.ಟಿ ಹಾಗೂ 13 ವಿದ್ಯಾರ್ಥಿಗಳು ಐ.ಐ.ಐ.ಟಿ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.
ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ನಾಗದೇವ್ ಎಂ.ಜಿ. – ಐ.ಐ.ಟಿ ಗುವಾಹಟಿ , ನಮಿತ್ ಕೆ. ಹೆಗಡೆ – ಐ.ಐ.ಟಿ ಹೈದರಾಬಾದ್ , ಪ್ರಥಮ್ ತಮ್ಮನಗೌಡರ್ – ಐ.ಐ.ಟಿ ಗಾಂಧಿನಗರ ಹಾಗೂ ರಶ್ಮಿ ಆರ್.ಎಚ್. – ಐ.ಐ.ಟಿ ಭುವನೇಶ್ವರ್
ಎನ್.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ತೇಜಸ್ ಆರ್.ಬಿ. – ಎನ್.ಐ.ಟಿ.ಕೆ ಸುರತ್ಕಲ್ , ತೇಜಸ್ ಹೆಗಡೆ – ಎನ್.ಐ.ಟಿ.ಕೆ ಸುರತ್ಕಲ್ , ದಿಶಾಂತ್ ಎಂ. – ಎನ್.ಐ.ಟಿ.ಕೆ ಸುರತ್ಕಲ್ , ಮನೋಜ್ ಎಸ್. – ಎನ್.ಐ.ಟಿ ಪಾಟ್ನಾ , ಅಕ್ಷತ್ ಆರ್. ಹೆಗಡೆ – ಎನ್.ಐ.ಟಿ ಭೋಪಾಲ್ ,ಅನಿರುದ್ಧ್ ಉಪಾಧ್ಯಾಯ – ಎನ್.ಐ.ಟಿ ಭೋಪಾಲ್ , ಬಸವರಡ್ಡಿ – ಎನ್.ಐ.ಟಿ ಗೋವಾ , ಅಕ್ಷತಾ ಎಂ. ಹೆಗಡೆ – ಎನ್.ಐ.ಟಿ ಆಂಧ್ರ ಪ್ರದೇಶ , ಧ್ರುವ ವಿ.ಬಿ. – ಎನ್.ಐ.ಟಿ ಅರುಣಾಚಲ ಪ್ರದೇಶ

ಐ.ಐ.ಐ.ಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ಧನುಷ್ ಹೆಚ್.ಎ. – ಐ.ಐ.ಐ.ಟಿ ಜಬಲ್ಪುರ್ ,ಸಂವಿತ್ ಅಮಿತ್ ಗೋಕರ್ಣ – ಐ.ಐ.ಐ.ಟಿ ಗುವಾಹಟಿ , ಧೃಶ್ – ಐ.ಐ.ಐ.ಟಿ ಗುವಾಹಟಿ , ಹೃತಿಕ್ ಮಹೇಶ್ – ಐ.ಐ.ಐ.ಟಿ ಗುವಾಹಟಿ , ನಿನಾದ್ ಆರ್. ನಾಯ್ಕ್ – ಐ.ಐ.ಐ.ಟಿ ಪುಣೆ , ಸುಕ್ಷೀತ್ ಜಿ. ಗೌಡ – ಐ.ಐ.ಐ.ಟಿ ಸುರತ್, ಸಿಂಚನ ಎಸ್. ಭಟ್ – ಐ.ಐ.ಐ.ಟಿ ಕೊಟ್ಟಾಯಂ , ಪ್ರಜ್ವಲ್ ಭಟ್ – ಐ.ಐ.ಐ.ಟಿ ಧಾರವಾಡ , ಪ್ರಜ್ಞಾಲೋಚನ ಬಿ.ಆರ್. – ಐ.ಐ.ಐ.ಟಿ ಧಾರವಾಡ ಪ್ರೀತಮ್ ಎನ್.ಬಿ. – ಐ.ಐ.ಐ.ಟಿ ಬಗಲ್ಪುರ್ , ನಯನಾ ಡಿ. ಗೊಂಡ – ಐ.ಐ.ಐ.ಟಿ ತಿರುಚಿರಾಪಳ್ಳಿ ಇದಲ್ಲದೆ, ಕುಶಾಲ್ ಎಲ್. ಅವರು ಎಸ್.ಪಿ.ಎ ಭೋಪಾಲ್ ಹಾಗೂ ತನ್ಮಯ್ ಆರ್. ಜಾದವ್ ಅವರು ಎಸ್.ಪಿ.ಎ ವಿಜಯವಾಡಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆಗೆ ಪಾತ್ರರಾದ ಎಲ್ಲಾ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.










