ಕುಂದಾಪುರ( ಆ ,25) : ಶಾಲಾ ಶಿಕ್ಷಣ ಇಲಾಖೆ ಕುಂದಾಪುರ ಇವರ ವತಿಯಿಂದ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕುಂದಾಪುರದ ಎಚ್.ಎಂ.ಎಂ. ಮತ್ತು ವಿ.ಕೆ.ಆರ್. ಶಾಲೆಗಳ ವಿದ್ಯಾರ್ಥಿಗಳಾದ ಆಶಿಷ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ವಿದ್ಯಾರ್ಥಿನಿ ಮನ್ವಿತಾ ಶಾಟ್ಪುಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರನ್ನು ಸಂಸ್ಥೆಯ ಸಂಚಾಲಕರಾದ ಬಿ ಎಮ್ ಸುಕುಮಾರ್ ಶೆಟ್ಟಿ, ಆಡಳಿತ ಮಂಡಳಿ, ಉಪ ಪ್ರಾಂಶುಪಾಲರಾದ ಶುಭಾ ಕೆ ಎನ್, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.










