ಗಂಗೊಳ್ಳಿ (ಫೆ:19) ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ವತಿಯಿಂದ 2021ನೇ ಸಾಲಿನಲ್ಲಿ ವಿತರಿಸಲಾಗುವ ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆ ಯ ವಿದ್ಯಾರ್ಥಿವೇತನಕ್ಕೆ ಅರ್ಹ ಶಿಕ್ಷಣಾರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ.
ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಹಿಂದಿನಂತೆ ಪ್ರಥಮ, ದ್ವಿತೀಯ ಪಿ.ಯು.ಸಿ. ಮತ್ತು ಪ್ರಥಮ ವರ್ಷದ ಪದವಿ ಶಿಕ್ಷಣ ಕಲಿಯುತ್ತಿರುವ ಎಲ್ಲಾ ವರ್ಗಗಳ, ಆರ್ಥಿಕವಾಗಿ ಹಿಂದುಳಿದ ಶಿಕ್ಷಣಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ಈ ಕೆಳಗಿನ ವಿಳಾಸದಾರರಿಂದ ಪಡೆದು ಭರ್ತಿ ಮಾಡಿದ ನಮೂನೆಗಳನ್ನು ದಿನಾಂಕ 05-03-2021 ಸಂಜೆ ಗಂಟೆ 5ರೊಳಗೆ ಅರ್ಜಿ ನಮೂನೆ ಪಡೆದ ವಿಳಾಸಕ್ಕೆ ಸಲ್ಲಿಸತಕ್ಕದ್ದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಫಾರಂ ಪಡೆಯುವ ಮತ್ತು ಸಲ್ಲಿಸುವ ವಿಳಾಸ:
ಯು. ರಾಧಾಕೃಷ್ಣ ಶ್ಯಾನುಭಾಗ್ ,ದಿವ್ಯಾ ಡ್ರೆಸ್ ಸೆಂಟರ್, ಕಾತ್ಯಾಯಿನಿ ಬಿಲ್ಡಿಂಗ್ ಕೃಷ್ಟ ಭವನ, ಬಂದರು, ಗಂಗೊಳ್ಳಿ
Ph: 265179, 265279, Mob :9964231501
ಅರ್ಜಿದಾರರಿಗೆ ಸೂಚನೆ :
- ಅರ್ಜಿಯಲ್ಲಿ ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡಿ, ಈ ಕೆಳಗಿನ ಶರತ್ತುಗಳನ್ನು ಪಾಲಿಸುವುದು.
- ಎಸ್. ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ತರಗತಿಗಳಲ್ಲಿ ಶೇಕಡಾ 75 ಅಂಕಗಳಿಸಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಅಂಶಿಕ ಮಾನದಂಡವಾಗಿ ಹಸಿರು ಪಡಿತರ ಚೀಟಿ ಹೊಂದಿದ ಕುಟುಂಬದವರಿಗಾಗಿ ಶೇಕಡಾ 65 ಅಂಕ ಗಳಿಸಿದವರೂ ಅರ್ಜಿ ಸಲ್ಲಿಸಬಹುದಾಗಿದೆ.
- ದೃಢೀಕೃತ ಅಥವಾ ಮೂಲ ಅಂಕಪಟ್ಟಿಯನ್ನು ಪರಿಶೀಲನೆಗೆ ಒಪ್ಪಿಸತಕ್ಕದ್ದು ಹಾಗೂ ಒಂದು ಭಾವಚಿತ್ರವನ್ನು ಲಗತ್ತಿಸಬೇಕು.
- ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಕಾಲೇಜುಗಳ ಸೂಚನಾ ಫಲಕದಲ್ಲಿ ಹಾಗೂ ಅರ್ಜಿ ಫಾರಂ ಸಲ್ಲಿಸಿದ ವಿಳಾಸದಲ್ಲಿ ಪ್ರಕಟಿಸಲಾಗುವುದು.
- ಪ್ರಕಟಿತ ಫಲಾನುಭವಿಗಳಿಗೆ ವಿದ್ಯಾರ್ಥಿವೇತನವನ್ನು ದಿನಾಂಕ : 14-03-2021 ರ ಸಂಜೆ ಗಂಟೆ 7-00 ಕ್ಕೆ ಗಂಗೊಳ್ಳಿಯ ಕೆ. ಎಫ್.ಡಿ. ಸಿ. ವಠಾರದಲ್ಲಿ ನಡೆಯಲಿರುವ ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಾಗುವುದು.
- ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಯೇ ಸ್ವತಃ ವೇದಿಕೆಯ ಮೇಲೆ ಬಂದು ವಿದ್ಯಾರ್ಥಿವೇತನ ಪಡೆದುಕೊಳ್ಳತಕ್ಕದ್ದು. ಅನ್ಯರಿಗೆ ಪಡೆಯುವ ಅವಕಾಶವಿರುವದಿಲ್ಲ.
- ವಿದ್ಯಾರ್ಥಿವೇತನ ಮಂಜೂರು ಮಾಡುವ ಹಕ್ಕು ಗುರುಜ್ಯೋತಿ ಶಿಕ್ಷಣನಿಧಿ ಯೋಜನೆಯ ಕಾರ್ಯನಿರ್ವಾಹಕ ಸಮಿತಿ ಕಾದಿರಿಸಿಕೊಂಡಿದೆ ಎಂದು ಆಯೋಜಕರು ತಿಳಿಸಿರುತ್ತಾರೆ.