ಗಂಗೊಳ್ಳಿ (ಫೆ.21) ಕಳೆದ 2 ವರ್ಷಗಳ ಹಿಂದೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿನ ನೀರಿನ ಟ್ಯಾಂಕ್ ಬಳಿ ಖಾಸಗಿ ಸ್ಥಳವೊಂದರಲ್ಲಿ ಪಂಚಾಯತ್ ನ ಅನುಮತಿ ಪಡೆಯದೇ ಅನುಮಾನಸ್ಪದ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು, ಜೊತೆಗೆ ಅನೇಕ ಅನುಮಾನಾಸ್ಪದ ವ್ಯಕ್ತಿಗಳು ಹೊತ್ತಲ್ಲದ ಹೊತ್ತಿನಲ್ಲಿ ಈ ಭಾಗದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಸ್ಥಳೀಯಾಡಳಿತವಾದ ಗಂಗೊಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಾನೂನು ಹೋರಾಟವನ್ನು ನಿರಂತರವಾಗಿ ಮಾಡಿದರೂ ಗ್ರಾಮ ಪಂಚಾಯತ್ ಇದನ್ನು ಗಂಭೀರ ವಿಷಯವೆಂದು ಪರಿಗಣಿಸಿಲ್ಲ ಎಂದು ಆರೋಪಿಸಿ ಫೆಬ್ರವರಿ 22 ರ ಬೆಳಿಗ್ಗೆ 10 ಗಂಟೆಗೆ ನ್ಯಾಯಕ್ಕಾಗಿ ಸಂಘರ್ಷ ಎನ್ನುವ ವಿಷಯದ ನೆಲೆಯಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯಿತಿ ಎದುರು ಬ್ರಹತ್ ಪ್ರತಿಭಟನೆಗೆ ಸಜ್ಜಾಗಿದೆ ಎಂದು ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ತಿಳಿಸಿದೆ.