ವಂಡ್ಸೆ (ಫೆ.26) : ಎಳವೆಯಲ್ಲೇ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೀತಿ, ಸಮಯಪ್ರಜ್ಞೆ, ವಿಶ್ವಮಾನವ ಪ್ರಜ್ಞೆ, ಆತ್ಮ ವಿಮರ್ಶೆ, ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಪ್ರಕೃತಿ ಸಹಜ ಮನುಷ್ಯರಾಗಬೇಕು ಎಂದು ಕುಂದಾಪುರದ ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹೇಳಿದರು.
ಅವರು ಆತ್ರಾಡಿಯ ವಿಜಯ ಮಕ್ಕಳ ಕೂಟ ಶಾಲೆಯಲ್ಲಿ ರೋಟರಿ ಕ್ಲಬ್ ಅಂಪಾರು ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ “ಜೀವನ ಮೌಲ್ಯಗಳು” ಎಂಬ ವಿಷಯದ ಕುರಿತು ಮಾತನಾಡಿದರು.
ರೋಟರಿ ಕ್ಲಬ್ ಅಂಪಾರಿನ ಅಧ್ಯಕ್ಷ ಶ್ರೀ ಸತೀಶ್ ಶೆಟ್ಟಿ ಮೂಡುಬಗೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ನ ಸದಸ್ಯರಾದ ಶ್ರೀ ಗಣಪಯ್ಯ ಶೆಟ್ಟಿ ಕೂಪ್ಕೋಡು, ಸುಕುಮಾರ ವೈದ್ಯ, ಉದಯ್ ಕುಮಾರ್ ಶೆಟ್ಟಿ ಮೂಡುಬಗೆ, ಗುರುರಾಜ್ ಶೆಟ್ಟಿ ಅಂಪಾರು, ವಿಜಯ ಮಕ್ಕಳ ಕೂಟದ ಪ್ರಾಂಶುಪಾಲೆ ದೀಪಿಕಾ ಸುಭಾಷ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸದಸ್ಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ರಾಜೀವ ಶೆಟ್ಟಿ ಶಾನಕಟ್ಟು ವಂದಿಸಿದರು. ವಿಜಯ ಮಕ್ಕಳ ಕೂಟದ ಸಂಚಾಲಕ ಶ್ರೀ ಸುಭಾಷ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು.