ಹುಟ್ಟು ಹುಡುಗಾಟದಿಂದ ಹುಟ್ಟಿಕೊಂಡ ಹುಚ್ಚು ಈ ಹುಡುಕಾಟ,
ಕಟ್ಟಿದ ಕನಸುಗಳಿಗೆ ಕಟ್ಟೆಯ ಕಟ್ಟಲು ಗಟ್ಟಿಯ ರಟ್ಟೆಗಾಗಿ ಹುಡುಕಾಟ,
ಹೊಟ್ಟೆಯೆಂಬ ಪಟ್ಟಣವಾಸಿಗಳ ಹೊಟ್ಟೆಯ ಹೊರೆಯಲು ತುತ್ತಿನ ಪೊಟ್ಟಣಕ್ಕಾಗಿ ಹುಡುಕಾಟ,
ಬೆಟ್ಟದಷ್ಟಿರುವ ಕಷ್ಟವ ಕುಟ್ಟಿ ಪುಡಿಗೈಯುವ ಬಲಿಷ್ಠ ಆ ಮುಷ್ಟಿಗಾಗಿ ಹುಡುಕಾಟ,
ಸೃಷ್ಟಿಯ ಸೌಧದ ಮೆಟ್ಟಿಲ ಮೇಲೆ ನಿಂತು ಹಾಯಿಸಿದ ದೃಷ್ಟಿ ಆ ಸೃಷ್ಟಿಕರ್ತನಿಗಾಗಿ ಹುಡುಕಾಟ.
#ಏನೇ_ಹೇಳಿ,
ಸದಾ ನನ್ನನ್ನೇ ನಾ ಹುಡುಕಿಕೊಳ್ಳುವ #ಪಾಗಲ್ ಆಗದೆ, ಅನ್ಯರ ಅನಿಸಿಕೆ, ಅನುಮಾನಗಳ ಹುಡುಕಿ ಬಗೆಹರಿಸುವ #Google ಆಗೋಣ.