ಕುಂದಾಪುರ(ಫೆ.27): ಮಾರ್ಚ್5ರಿಂದ 11ರ ವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 69ನೇ ರಾಷ್ಟ್ರೀಯ ಸೀನಿಯರ್ ವಾಲಿಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಈ ಬಾರಿ ಕುಂದಾಪುರದ ಹೆಮ್ಮಾಡಿಯ ರೈಸನ್ ಬೆನೆಟ್ ರೆಬೆಲ್ಲೊ ನಾಯಕನಾಗಿ ಮುನ್ನಡೆಸಲಿದ್ದಾರೆ. ಈಗಾಗಲೇ ಹಲವಾರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುವ ಇವರು 2019ರಲ್ಲಿ ನಡೆದ 67ನೇ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ರಾಜ್ಯ ತಂಡ ಗೆದ್ದು ಬರುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಇನ್ನೊಂದು ಸಂತೋಷದ ಸಂಗತಿಯೆನೆಂದರೆ ಈ ತಂಡದಲ್ಲಿ ಕುಂದಾಪುರದ ವಂಡ್ಸೆ ಸಮೀಪದ ಚಿತ್ತೂರಿನ ನವೀನ್ ಕಾಂಚನ್ ಹಾಗೂ ಕಾರ್ಕಳದ ಸುಧೀರ್ ಶೆಟ್ಟಿ ಕೂಡ ಸ್ಥಾನ ಪಡೆದಿದ್ದಾರೆ.












