ಹೆಮ್ಮಾಡಿ (ಎ. 2): ಪುರಾಣ ಪ್ರಸಿದ್ದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವವು ಇದೇ ಏಪ್ರಿಲ್ 27ರಂದು ನಡೆಯಲಿದ್ದು, ರಥೋತ್ಸವದ ಪೂರ್ವ ತಯಾರಿ ಹಿನ್ನಲೆಯಲ್ಲಿ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆಯು ಏಪ್ರಿಲ್ 4 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಬಳಿ ಇರುವ ಮಹಿಷಾಸುರ ಮರ್ದಿನಿ ಸಭಾಭವನದಲ್ಲಿ ನಡೆಯಲಿದ್ದು, ಈ ಸಭೆಯನ್ನು ನಾಡೋಜಾ ಡಾ. ಜಿ. ಶಂಕರ್ ರವರು ಉದ್ಘಾಟಿಸಲಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು […]
Day: April 2, 2021
ಪ್ರೋ. ರಾಮಚಂದ್ರ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ
ಕುಂದಾಪುರ (ಎ. 1): ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ರಾಮಚಂದ್ರ ರವರು ಮಂಡಿಸಿದ ಮರಾಠಿ ಸಮುದಾಯಗಳ ತೌಲನಿಕ ಅಧ್ಯಯನ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ. ನೀಡಿದೆ. ಇವರು ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ। ಗಂಗಾಧರ ದೈವಜ್ಞ ರಿಂದ ಮಾರ್ಗದರ್ಶನ ಪಡೆದಿದ್ದಾರೆ. ಹಾಗೂ ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಡಾ| ಪೂರ್ವಚಾರ್ ಎಂ. ರವರು ಸಹ […]
ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ಮಾಹಿತಿ ಕಾರ್ಯಾಗಾರ
ಉಡುಪಿ (ಮಾ. 31) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಮಾಲೋಚನಾ (ಕೌನ್ಸೆಲಿಂಗ್) ಘಟಕವು ದಿನಾಂಕ 30 ಮಾರ್ಚ್2021ರಂದು “ಕೌನ್ಸೆಲಿಂಗ್ ಸ್ಟ್ರಾಟಜಿಸ್” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಿತ್ತು. ಕಾರ್ಯಗಾರದಲ್ಲಿ ರೋಶನಿ ನಿಲಯ, ಮಂಗಳೂರು ಇದರ ಉಪಪ್ರಾಂಶುಪಾಲರಾದ ಡಾ.ಜೆನಿಸ್ ಮೇರಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವ್ಯಕ್ತಿಯ ದೇಹ ಮತ್ತು ಮನಸ್ಸು ನಡುವಿನ ಸಮತೋಲನ ಹಾಗೂ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಸಂವಹನ, ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸುವುದು ಮತ್ತು […]
ಬಂಟಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಕುರಿತಾದ ಉಪನ್ಯಾಸ
ಉಡುಪಿ (ಮಾ. 30): ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಖಾತ್ರಿ ಘಟಕವು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ “ಉನ್ನತ ಶಿಕ್ಷಣ ರಂಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020ರ ಪರಿಣಾಮಗಳು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಸಿ. ಕೆ. ಮಂಜುನಾಥ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇವರು ತಮ್ಮ ಉಪನ್ಯಾಸದಲ್ಲಿ ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ […]
ಬೈಂದೂರು ಎಳಜಿತ್ ನ ವಿದ್ಯಾಗೌಡರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ
ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ( BSF) ಆಯ್ಕೆಗೊಂಡ ಬೈಂದೂರು ಎಳಜಿತ್ ನ ವಿದ್ಯಾಗೌಡ ರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್
ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಶನ್ ಸೈನ್ಸ್ ವಿಭಾಗಗಳು ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಉದ್ಘಾಟನೆ ಮಾ. 29 ರಂದು ನಡೆಯಿತು.
ಬದುಕಿನ ತಲ್ಲಣ
ಬದುಕು ಎಂದರೇನು? ಇದನ್ನುತಿಳಿಯೋ ಪ್ರಯತ್ನ ಹಲವು ಬಾರಿ ಮಾಡಿದ್ದುಂಟು.ಅದೆಷ್ಟೋ ಬಾರಿ ಇನ್ನೊಬ್ಬರ ಇಷ್ಟಕ್ಕೆ , ನಮ್ಮ ಇಷ್ಟ- ಕಷ್ಟ ಬದಲಾಗುತ್ತಿದ್ದಾಗ, ನಾವು ಮಾಡುತಿರುವುದಂತೂ ಪ್ರದರ್ಶನ ಅನ್ನಿಸುವುದಂತೂ ಸತ್ಯ. ಈ ನಾಟಕವೇಕೆ? ಅಂದ ಮಾತ್ರಕೆ ಇವರೆಲ್ಲರ ಮಾತೇಕೆ ಒಪ್ಪಬೇಕು.! ಒಮ್ಮತ ಸೂಚಿಸದೇ ಹೋದರೆ?ಆಗಂತೂ, ಅವರ ಮಾತಿಗೆ, ಅಪವಾದಕ್ಕೆ ಎಲ್ಲಿ ಬಲಿಯಾಗುತ್ತೇವೆನೊ ಎನ್ನುವ ಭಯ, ಅದನ್ನು ಮೀರಿ ಒಬ್ಬಂಟಿಯಾಗಿ ಹೋರಾಡೋ ಮನಸು ಮಾಡಿದಾಗ, ಮುಂದೆ ನಿಲ್ಲೋ ಸವಾಲು ಹಲವಾರು… ನಮ್ಮ ಮಾತೇ ದಿಕ್ಕರಿಸಿರುವೇ..!?, […]