ಉಡುಪಿ (ಮಾ. 9) ತನ್ನದೆಯಾದ ಸಂಸ್ಕೃತಿಗಳ ಅಸ್ಮಿತೆ, ಜನಪದ ಹಾಡುಗಳು, ಭಾಷಾ ಸೊಗಡು ಹಾಗೂ ವಿಶೇಷ ಆಚರಣೆಯನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ಭಾಗದ ಜನರ ಆಡುಭಾಷೆಯಾಗಿರುವ ಕುಂದಗನ್ನಡದ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಕುಂದಗನ್ನಡ ಭಾಷಾ ಅಧ್ಯಯನ ಪೀಠ ಸ್ಥಾಪನೆಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಈ ಕುರಿತು ಮಂಗಳೂರು ವಿವಿಯ ಕುಲಸಚಿವರು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರು ವಿವಿ ಸಿಂಡಿಕೇಟ್ ತೆಗೆದುಕೊಂಡ ನಿರ್ಣಯ ಆಧುನಿಕತೆಯ ಹೊಡೆತಕ್ಕೆ ಸಿಲುಕಿರುವ ಕುಂದಗನ್ನಡದ ರಕ್ಷಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ.