ಕುಂದಾಪುರ( ಮಾ.14): ನಿರಂತರ ಅಭ್ಯಾಸ, ಶಿಸ್ತು, ಸಮಯ ಪಾಲನೆಯಿಂದ ವಿದ್ಯಾರ್ಥಿಗಳು ತಮ್ಮನ್ನು ಓದಿನ ಕಡೆಗೆ ತೊಡಗಿಸಿಕೊಂಡರೆ ಸಿಎ/ಸಿಎಸ್ ಮತ್ತು ಯುಪಿಎಸ್ಸಿ ಅಂತಹ ಅತ್ಯುತ್ತಮ ಕೋರ್ಸುಗಳನ್ನು ಅನಾಯಾಸವಾಗಿ ಪೂರ್ಣಗೊಳಿಸಬಹುದು ಎಂದು ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ರವರು ಹೇಳಿದರು .
ಅವರು ಕುಂದಾಪುರದ ಕುಂದೇಶ್ವರ ದೇವಸ್ಥಾನದ ರಸ್ತೆಯ ಬಳಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷ ಪ್ರಭಾಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯಲ್ಲಿ ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ ಮೀಡಿಯೇಟ್ ತೇರ್ಗಡೆ ಹೊಂದಿದ ಸಂಸ್ಥೆಯ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಅತೀ ಮೌಲ್ಯ ಸಮಯ ವ್ಯರ್ಥವಾಗದಂತೆ ನೋಡಿಕೊಂಡು ಇಂತಹ ಪ್ರೊಫೇಶನಲ್ ಕೋರ್ಸ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಐಸಿಎಐ ನವೆಂಬರ್ ನಲ್ಲಿ ನಡೆಸಿದ ಸಿ.ಎ ಇಂಟರ್ ಮೀಡಿಯೇಟ್ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗಣ್ಯರು ಪೋಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಶಿಕ್ಷ ಪ್ರಭಾ ಅಕಾಡೆಮಿ ಸ್ಥಾಪನೆಯಾದ ವರ್ಷದಿಂದ ಪ್ರತಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ತೋರುತ್ತಿದ್ದಾರೆ. ಈ ವರ್ಷದ ಕೋವಿಡ್ ಭೀತಿಯ ನಡುವೆ ಆನ್ ಲೈನ್ ತರಗತಿಯ ಲಾಭ ಪಡೆದು ಅನೇಕ ಸಮಸ್ಯೆಗಳನ್ನು ಮೆಟ್ಟಿನಿಂತು ಉತ್ತಮ ಫಲಿತಾಂಶ ನೀಡಿರುವುದು ಸಂಸ್ಥೆಗೆ ಮತ್ತು ಪೋಷಕರಿಗೆ ಹೆಮ್ಮೆ ತರುವಂತಹ ವಿಷಯ ಮತ್ತು ಸಂಸ್ಥೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತರಗತಿಗಳನ್ನು ನಡೆಸುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಸಭೆಯನ್ನು ಉದ್ದೇಶಿಸಿ ನುಡಿದರು.

ಕಾರ್ಯಕ್ರಮದಲ್ಲಿ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಇದರ ಯುವ ಅಧಿಕಾರಿ ವಿಲ್ಫ್ರೆಡ್ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷ ಪ್ರಭಾ ಅಕಾಡೆಮಿಯ ನಿರ್ದೇಶಕರಾದ ಭರತ್ ಶೆಟ್ಟಿ ಮತ್ತು ಪ್ರತಾಪ್ ಚಂದ್ರ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಜೋಸೆಫ್ .ಎಂ.ರೆಬೆಲ್ಲೋ ಮುಂತಾದವರು ಉಪಸ್ಥಿತರಿದ್ದರು. ಸಹರ ಸ್ವಾಗತಿಸಿದರು, ವಿಖ್ಯಾತ್ ಧನ್ಯ ಸಮರ್ಪಿಸಿದರು, ಶ್ರೇಯ ಭಟ್ ನಿರೂಪಿಸಿದರು.










