ಮೈಸೂರು ( ಮಾ.16) ದೇಶದ ಸಮಗ್ರ ಅಭಿವ್ರದ್ದಿ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಎನ್.ಎಸ್ .ಎಸ್ ಮಹತ್ವದ ಪಾತ್ರ ವಹಿಸುತ್ತಿದೆ.ಗ್ರಾಮಗಳ ಅಭಿವೃದ್ಧಿಯಲ್ಲಿ ಎನ್.ಎಸ್.ಎಸ್ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಸೂರು ವಿ.ವಿ ಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು. ಅವರು ಮಾರ್ಚ್ 16 ರಿಂದ 22 ರ ತನಕ ಮೈಸೂರಿನ ಸರಸ್ವತಿಪುರಂನ ಎನ್.ಎಸ್.ಎಸ್ ಭವನದಲ್ಲಿ ರಾಜ್ಯದ ವಿವಿಧ ಕಾಲೇಜಿನಿಂದ ಆಗಮಿಸಿದ ಎನ್ನೆಸ್ಸೆಸ್ ಯೋಜನಾಧಿಕಾರಿಗಳಿಗೆ ಆಯೋಜಿಸಿದ್ದ ಇಟಿಐ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮೈಸೂರು ಯುವರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ, ಎನ್ನೆಸ್ಸೆಸ್ ನಿವೃತ್ತ ಕಾರ್ಯಕ್ರಮ ಅಧಿಕಾರಿ ಪ್ರೊ.ಬಿ.ಕೆ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮೈ.ವಿ.ವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್, ಪ್ರೊ ಜಿ.ಬಿ. ಶಿವರಾಜ್, ಪ್ರೊ.ಕೆ. ಕಾಳಚನ್ನೇಗೌಡ, ಪ್ರೊ.ಕೆ.ಎಂ.ವೀರಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೈಸೂರು ವಿ.ವಿ ಎನ್ನೆಸ್ಸೆಸ್ – ಇಟಿಐನ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ ಸ್ವಾಗತಿಸಿದರು. ಸಹ ಸಂಯೋಜನಾಧಿಕಾರಿ ಪ್ರೋ.ಚಿಕ್ಕಕೆಂಪೇಗೌಡರವರು ವಂದಿಸಿದರು. ಬಾಹುಬಲಿ ಕಾರ್ಯಕ್ರಮವನ್ನು ನಿರೂಪಿಸಿದರು.
ಮೈಸೂರು.ವಿ.ವಿ ಎನ್ನೆಸ್ಸೆಸ್ ಇಟಿಐಯಿಂದ ಸರಸ್ವತಿಪುರಂನ ಎನ್ನೆಸ್ಸೆಸ್ ಭವನದಲ್ಲಿ ರಾಜ್ಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳ 4 ಮತ್ತು 5ನೇ ತಂಡಗಳಿಗೆ ಈ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.