ಕುಂದಾಪುರ ( ಮೇ ,13): ಕರ್ನಾಟಕ ರಾಜ್ಯ ಅತ್ಲೇಟಿಕ್ಸ್ ಕ್ರೀಡಾಕೂಟ 2025 ,ದಕ್ಷಿಣ ಕನ್ನಡ ಅತ್ಲೇಟಿಕ್ಸ್ ಅಸೋಸಿಯೇಷನ್ ಹಾಗೂ ಎಂಡೋರೆನ್ಸ್ ಸ್ಪೋರ್ಟ್ಸ್ ಅಕಾಡೆಮಿ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಕಿರಿಯರ ಅತ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ 3 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕದೊಂದಿಗೆ ಒಟ್ಟು 7 ಪದಕದೊಂದಿಗೆ ಗಮನಾರ್ಹ ಸಾಧನೆ ತೋರಿದ್ದಾರೆ.
8 ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಭವಿಶ್ಯ – ಸ್ಟ್ಯಾಂಡಿಂಗ್ ಬೋರ್ಡ್ ಜಂಪ್ನಲ್ಲಿ ಕಂಚಿನ ಪದಕ ಹಾಗೂ ಬಾಲ್ ಥ್ರೋ ಅಲ್ಲಿ ಕಂಚಿನ ಪದಕ. 10 ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಅರ್ಥಸ್ ಶೆಟ್ಟಿ – 30 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ. 10 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ತನಿಶ್ ಯು ಶೆಟ್ಟಿ – ಬಾಲ್ ಥ್ರೋ ಅಲ್ಲಿ ಚಿನ್ನದ ಪದಕ.
14 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಪ್ರಕುಲ್ ಆರ್. ಕುಂದರ್ – ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ. 16 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ರೋನಕ್ ಆರ್ ಕಾರ್ವಿ – ಶಾಟ್ ಪುಟ್ ಅಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.
ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಕಾಡೆಮಿಯ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.