ಇಳಿಸಂಜೆಯ ಹೊತ್ತು ,
ಅದು ನೀನಿಳಿದು ಹೋಗುವ ಹೊತ್ತು
ನೀನೆಂದರೆ ಮಸ್ತಕಕ್ಕೇರುವ ಮತ್ತು ,
ವಾಸ್ತವಕ್ಕೆ ಬರಲೆಂದೇ ನಿತ್ಯ ನೀನಿಳಿದು ಹೋಗುವೆ ಎನ್ನುವುದು ಗೊತ್ತು
ಕಾದಿರುವೆ ಬಹಳ ಕಾತುರವ ಹೊತ್ತು ,
ಕಳೆದುಕೊಂಡಿರುವುದೂ ಬಹಳವೇ ಇತ್ತು
#ಏನೇ_ಹೇಳಿ ,
ಈ ಮರುಳನಿಗೇನು ಗೊತ್ತು ,
ಮರಳಿನ ಮೇಲೆ ಮೂಡುವುದಿಲ್ಲವೆಂದು ನಿನ್ನ ಆ ಹೆಜ್ಜೆಯ ಒತ್ತು.