ಉಡುಪಿ (ಮಾ. 31) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಮಾಲೋಚನಾ (ಕೌನ್ಸೆಲಿಂಗ್) ಘಟಕವು ದಿನಾಂಕ 30 ಮಾರ್ಚ್2021ರಂದು “ಕೌನ್ಸೆಲಿಂಗ್ ಸ್ಟ್ರಾಟಜಿಸ್” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಿತ್ತು. ಕಾರ್ಯಗಾರದಲ್ಲಿ ರೋಶನಿ ನಿಲಯ, ಮಂಗಳೂರು ಇದರ ಉಪಪ್ರಾಂಶುಪಾಲರಾದ ಡಾ.ಜೆನಿಸ್ ಮೇರಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವ್ಯಕ್ತಿಯ ದೇಹ ಮತ್ತು ಮನಸ್ಸು ನಡುವಿನ ಸಮತೋಲನ ಹಾಗೂ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಸಂವಹನ, ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಹೇಗೆ ಪರಿಹರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಮೆದುಳನ್ನು ಸಕಾರಾತ್ಮಕ ಆಲೋಚನೆಗಳಿಂದ ತುಂಬಿಸಬೇಕು. ಸಕಾರಾತ್ಮಕ ಭಾವನೆಗಳು ನಮ್ಮ ಆತ್ಮದ ಭಾಷೆ ಎಂದು ಅವರು ಹೇಳಿದರು. ಮನುಷ್ಯರಲ್ಲಿ ಚಟ ಮತ್ತು ನಕಾರಾತ್ಮಕ ಭಾವನೆಗಳು ಬರಲು ಕಾರಣಗಳನ್ನು ತಿಳಿಸಿದರು. ಅವರು ಕೆಲವು ಚಟುವಟಿಕೆಗಳನ್ನು ನಡೆಸಿದರು. ಸಿವಿಲ್ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ದೀಪಿಕಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾಲೇಜಿನ ಕೌನ್ಸೆಲಿಂಗ್ ಘಟಕದ ಸಂಯೋಜಕಿ ಶ್ರೀಮತಿ ಶಶಿಕಲಾ .ಆರ್. ಕಾರ್ಯಕ್ರಮವನ್ನು ಸಂಯೋಜಿಸಿದರು.













