ಕುಂದಾಪುರ (ಎ. 1): ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ರಾಮಚಂದ್ರ ರವರು ಮಂಡಿಸಿದ ಮರಾಠಿ ಸಮುದಾಯಗಳ ತೌಲನಿಕ ಅಧ್ಯಯನ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ. ನೀಡಿದೆ.
ಇವರು ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ। ಗಂಗಾಧರ ದೈವಜ್ಞ ರಿಂದ ಮಾರ್ಗದರ್ಶನ ಪಡೆದಿದ್ದಾರೆ. ಹಾಗೂ ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಡಾ| ಪೂರ್ವಚಾರ್ ಎಂ. ರವರು ಸಹ ಮಾರ್ಗದರ್ಶಕರಾಗಿದ್ದಾರೆ.