ಮಂಗಳೂರು (ಏ, 7): ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಆನಿರ್ದಿಷ್ಟಾವಧಿಗೆ ಮುಂದುವರೆದಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯವು ದಿನಾಂಕ 08-04-2021 ರಿಂದ 10-04-2021ರ ವರೆಗೆ ನಿಗದಿಪಡಿಸಿದ್ದ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ.
ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು,
ಉಳಿದ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಈ ಕುರಿತು ಕೂಡಲೇ ವಿದ್ಯಾರ್ಥಿಗಳ ಗಮನಕ್ಕೆ ತರಲಾಗುವುದು ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಪ್ರೋ. ಪಿ. ಎಲ್. ಧರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.