ಬಿಜಾಪುರ (ಏ. 9): ಇತ್ತೀಚೆಗೆ ಛತ್ತೀಸ್ ಗಡ್ ನಲ್ಲಿ ನಕ್ಸಲರು ನಡೆಸಿದ ರಕ್ತಪಾತದಿಂದಾಗಿ 22 ಯೋಧರು ಹುತಾತ್ಮರಾಗಿದ್ದು ಜೊತೆಗೆ ಕೋಬ್ರಾ ಕಮಾಂಡೋ ಯೋಧನ ರಾಕೇಶ್ವರ್ ಸಿಂಗ್ ಮನ್ಹಾಸ್ ರನ್ನು ನಕ್ಸಲ್ ರು ಅಪಹರಣ ಮಾಡಿ ತಮ್ಮ ವಶದಲ್ಲಿರಿಸಿಕೊಂಡಿದ್ದರು.
ಛತ್ತೀಸ್ ಗಡ್ ಸರ್ಕಾರ ಅಪಹರಣಕ್ಕೀಡಾದ ಯೋಧರನ್ನು 5 ದಿನಗಳ ಬಳಿಕ ನಕ್ಸಲರ ಜೊತೆ ಮಾತುಕತೆ ನಡೆಸಿದ ಫಲವಾಗಿ ಯೋಧನನ್ನು ನಕ್ಸಲರು ಎಪ್ರಿಲ್ 8 ರಂದು ಬಿಡುಗಡೆ ಮಾಡಿದ್ದಾರೆ.