ಪಶ್ಚಾತಾಪ
ನಾನಾಗ ಕೂಗಿ ಅದೆಷ್ಟೊ ಬೈದಿದ್ದೆ
ಬಾಯಿಯೆ ಆಯುಧವಾಗಿ
ನೀನೆ ನನ್ನ ಶತ್ರು ಎಂಬಂತೆ
ನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ
ಬೖೆಗುಳವನು ಚೀಲದಲಿ ತುಂಬಿ
ನಿನ್ನ ಮೈ ತುಂಬ ಸುರಿದಿದ್ದೆ
ಕೋಪ ಎಂಬ ಕೆಂಡವನು
ನಿನ್ನ ಸುತ್ತಲು ಉದಿದ್ದೆ
ಎಲ್ಲಾವನು ಮರೆತು ಪ್ರೀತಿ ಎಂಬ
ಇಡೀ ಪರ್ವತ ವನ್ನು ಹೊತ್ತು ತಂದು
ಮತ್ತೆ ಮದ್ದಿಸುವ ಜೀವಿ
ನೀನೊಬ್ಬನೆ ಅಪ್ಪ….
ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದ
ತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದ
ನನ್ನ ಮುಖ ನಿನ್ನ ಎದೆಗಂಟಿದಾಗ
ಸತ್ತು ಬದುಕಿದ ಅನುಭವ…
✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)