ಮೌನಿಯಾಗಬೇಕೆನಿಸಿದೆ..
ಮನೆಯೆಲ್ಲಾ ಓಡಾಡಿ,ಬಾಯ್ತುಂಬಾ ಕೂಗಾಡಿ
ಅಮ್ಮನಿಗೊಂದಿಷ್ಟು ಬೈಗುಳ, ಅಪ್ಪನಿಗೊಂದಿಷ್ಟು ಶಾಪ
ಬಾಯಲ್ಲೆ ಆಯುದವನಿಟ್ಟಂತೆ ಯುದ್ಧ ಸಾರುತಿದ್ದೆ..
ನನ್ನ ಅಭ್ಯುದಯಕ್ಕೆ ಶ್ರಮಿಸುವ ಜನಗಳ ಜತೆಗೆ
ಇಂದೆಕೊ ಮೌನಿಯಾಗಬೇಕೆನಿಸಿದೆ..
ಕಣ್ಣ ಕಂಡರೆ ಕೆಂಡ ಕಾರುವ ಕೆಂಪು ಕೋಪ
ನಾಲಿಗೆಯಿಂದ ಜಠರದುದ್ದಕ್ಕೂ ಬೈಗುಳದ ತಾಪ
ಉದರದಸಿವಿಗೆ ಕೊರಳನ್ನೊಡ್ಡುವ ಅನ್ನವನೆಸೆದಿದ್ದೆ ಅಮನಸ್ಕನಂತೆ…
ಚೆಲ್ಲಿ ಘರ್ಜಿಸಿದೆ ತೀಥ೯ದಂತಹ ಗಂಗೆಯನ ಟೊಳ್ಳು ವ್ಯಾಘ್ರನಂತೆ
ಇಂದೆಕೊ ಮೌನಿಯಾಬೇಕೆನಿಸಿದೆ…
ಮೃದುತನವ ರಕ್ಷಿಸಿದ ಮನಸ್ಸುಗಳ ಮದ್ಯೆ ,ವಚನದುದ್ದಕ್ಕು ಕರ್ಕಶದಂತಹ ಗಟ್ಟಿ ದನಿ ನನ್ನೊಳಗಿಂದಾದರೆ
ಕೇಳಲಿಸ್ಟವಾಗದೆ ಕಿವಿಯ ಬಾಗಿಲೆಳೆಯವರು ವಾಣಿಯ ನಾನಾಡಿದರೆ
ಮುರಿದ ಮನಸ್ಸಿಂದ ಇಷ್ಟವಿಲ್ಲದ ಮಾತಾದರೆ,ಕಷ್ಟದಿಂದ ನೋಡುವ ನೋಟಗಳು
ನಾದವೆ ಮರೆತ ಮನಸ್ಸಿಂದ ನಟನೆಯ ಗೆಜ್ಜೆ ಕಟ್ಟಿ ನಗೆಯ ನೃತ್ಯದ ಪ್ರಯತ್ನ
ಎಲ್ಲವು ಈ ಶೂನ್ಯ ಬೆಲೆಯ ಕೋಪದಿಂದ
ಇಂದೆಕೊ ಮೌನಿವಾಗಬೇಕೆನಿಸಿದೆ…
ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)
ಸೂಪರ್ ಬರಹ ಬ್ರೊ…