ಕುಂದಾಪುರ (ಎ, 16): ಕುಂದಾಪುರದ ವಿಠ್ಠಲ ನೇತ್ರಾಲಯ ರಸ್ತೆ ಯಲ್ಲಿ ನೂತನವಾಗಿ ಪ್ರಾರಂಭವಾದ ಫ್ಯಾಶನ್ ಜುವೆಲರ್ಸ್ ನ್ನು ನಾವುಂದ ರಿಚರ್ಡ್ ಅಲ್ಮೇಡಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀ ಸಿಲ್ವೆಸ್ಟರ್ ಡಿ’ ಅಲ್ಮೇಡಾ ಉದ್ಘಾಟಿಸಿದರು.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ವಿವಿಧ ವಿನ್ಯಾಸಗಳಲ್ಲಿ ನಿರ್ಮಾಣ ಮಾಡಿ ಗ್ರಾಹಕರನ್ನು ಸಂತ್ರಪ್ತಿಗೊಳಿಸುವಲ್ಲಿ ಫ್ಯಾಶನ್ ಜುವೆಲರ್ಸ್ ಯಶಸ್ಸುಕಾಣಲಿದೆ ಎಂದು ಅವರು ಶುಭಹಾರೈಸಿದರು. ಕುಂದಾಪುರದ ವಿಠ್ಠಲ ನೇತ್ರಾಲಯದ ಡಾ|ಶ್ರೀನಾಥ್ ಕಾಮತ್ ಹಾಗೂ ತುಕಾರಾಮ್ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಲವಾರು ವರ್ಷಗಳಿಂದ ಚಿನ್ನಾಭರಣಗಳ ವಿವಿಧ ವಿನ್ಯಾಸಗಳನ್ನು ಮಾಡಿ ಪ್ರಸಿದ್ದಿ ಪಡೆದಿರುವ
ಕುಂದಾಪುರ ಫ್ಯಾಶನ್ ಜುವೆಲರ್ಸ್ ಮಾಲಕ ಈಶ್ವರ್ ಯಾದವ್, ಮಾಲತಿ ಯಾದವ್, ವೈಭವ್ ಯಾದವ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.













