ಸಾಮಾಜಿಕ_ಜವಾಬ್ದಾರಿ
ಸಮಾಜದಲ್ಲಿ ಸಕಲ ಜೀವಿಗಳೊಂದಿಗೆ ಸಹಬಾಳ್ವೆಯಿಂದ ಬಾಳುವ ಪಾಠವನ್ನು ಕಲಿತ ಪ್ರತಿ ಒಬ್ಬ ವ್ಯಕ್ತಿಯೂ ‘ಸಂಘ’ಜೀವಿ. ತನ್ನ ಬದುಕು ತನಗಲ್ಲ ಅದು ಲೋಕದ ಹಿತಕೆ, ತನಗಾಗಿ ಮಾಡಿದ್ದು ತನ್ನೊಂದಿಗೆ ಮುಗಿದುಹೋಗುವುದು ಪರರಿಗಾಗಿ ದುಡಿದಿದ್ದು ತನ್ನ ನಂತರವೂ ಇರುವುದೆಂಬ ‘ಸಂಘ’ಜೀವನದ ಆದರ್ಶ ಬದುಕಿಗೆ ಹಿರಿಯರು ಬೋದಿಸಿದ ‘ವಿವೇಕ’ವಾಣಿ.
ಕೊಡುಕೊಳ್ಳವಿಕೆಯ ಸಾಮಾಜಿಕ ವ್ಯವಹಾರದಲ್ಲಿ ಸಮಾಜ ನಮಗೆ ನೀಡಿದ ಉಡುಗೊರೆಗಳ ಮುಂದೆ ನಮ್ಮ ಕೊಡುಗೆಗಳು ಅತ್ಯಂತ ಅಲ್ಪ. ಎಷ್ಟೇ ಸಪ್ಪೆ ನೀರು ಸುರಿದರೂ ಸಮುದ್ರದ ನೀರು ತನ್ನ ಉಪ್ಪಿನ ಗುಣವನ್ನು ಬಿಟ್ಟುಕೊಡದು, ಹಾಗಾಗಿಯೇ ಇಡೀ ಜೀವನವನ್ನು “ಪಡೆಯಬೇಕೆಂಬ”(ಗಳಿಸಬೇಕೆಂಬ) ಪಗಡೆಯಾಟಕ್ಕೆ ಪಣವಾಗಿರಿಸಿ ಪರಿತಪಿಸುತ್ತಿರುತ್ತೇವೆ ಅದು ಏನು ಪಡೆಯಬೇಕೆನ್ನುವ ಸ್ಪಷ್ಟತೆಯಿಲ್ಲದೆ. ನನ್ನ ಸಂತೋಷದಲ್ಲಿ ಸಮಾಜದ ಪಾಲು ಅಧಿಕವಾಗಿರುತ್ತದೆ ಹಾಗೆಯೇ ಸಮಾಜ ಸಂಕಷ್ಟದಲ್ಲಿರುವಾಗ ನನಗೂ ಅದರಲ್ಲಿ ಬಹುಪಾಲು ಇರುತ್ತದೆ. ಸಂಕಷ್ಟದ ಸಮಯದಲ್ಲೂ ತಾನೊಬ್ಬ ಸಂತುಷ್ಟನಾಗಿ ಬದುಕುತ್ತೇನೆನ್ನುವ ವ್ಯಕ್ತಿ ಅತ್ಯಂತ ಕನಿಷ್ಠ. ಸುಖಕ್ಕೆ ಸಾವಿರಾರು ಪಾಲುದಾರರು ಸಿಗುತ್ತಾರೆ ಆದರೆ ದುಃಖದಲ್ಲಿ ಭಾಗವಾಗುವುದು ಒಂದು ಮಹಾಯೋಗ.
#ಏನೇ_ಹೇಳಿ,
#ಸಾಮಾಜಿಕ_ಜವಾಬ್ದಾರಿ ಒಂದೇ
ಸ್ವಾಸ್ಥ್ಯ , ಸದೃಢ ಸಮಾಜದ ಹೆದ್ದಾರಿ.