ಕುಂದಾಪುರ (ಏ, 24) : ಇತ್ತೀಚೆಗೆ ನಡೆದ 18 ನೇ ಲಯನ್ಸ್ ಜಿಲ್ಲಾ ಸಮ್ಮೇಳನದ 4 ನೇ ಲಯನ್ಸ್ ಜಿಲ್ಲಾ ಸಂಪುಟ ಸಭೆಯಲ್ಲಿ ಚಿತ್ರದುರ್ಗಾ, ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಸಿ ಯ “ಎಮರ್ಜಿಂಗ್ ಲಯನ್ ಆಫ್ ದ್ ಡಿಸ್ಟ್ರಿಕ್ಟ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು.
ಈ ಲಯನ್ಸ್ ವರ್ಷದಲ್ಲಿ ಅಕ್ಷಯ ಹೆಗ್ಡೆಯವರು ಅಧ್ಯಕ್ಷರಾಗಿ ತನ್ನ ಕ್ಲಬ್ನಲ್ಲಿ 200% ಮೆಂಬರ್ ಶಿಪ್ ಗ್ರೋತ್ ಕೊಟ್ಟಿದ್ದಲ್ಲದೇ, ಒಂದು ಲಿಯೋ ಕ್ಲಬ್ ಮತ್ತು ಒಂದು ಲಯನ್ಸ್ ಕ್ಲಬ್ ಅನ್ನು ಲಯನ್ಸ್ ಜಿಲ್ಲೆಗೆ ಕೊಟ್ಟಿರುತ್ತಾರೆ. ಹಾಗೆಯೇ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಬಹುಮಾನ ಪಡೆದು,ಅನೇಕ ಸೇವಾ ಚಟುವಟಿಕೆಗಳ ಮೂಲಕ ಜಿಲ್ಲೆಯ ಕ್ರಿಯಾಶೀಲ ಲಯನ್ ಆಗಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗಡೆ, ಪ್ರಥಮ ಉಪ ಜಿಲ್ಲಾ ಗವರ್ನರ್ ಹೆರ್ಗ ವಿಶ್ವನಾಥ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ.ಸಿ. ವೀರಭದ್ರ ಮುಂತಾದವರು ಉಪಸ್ಥಿತರಿದ್ದರು.