ಕುಂದಾಪುರ(ಎ,20): ತಾಲೂಕಿನ ಬಿದ್ಕಲ್ ಕಟ್ಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಸರ್ಕಾರಿ ಪದವಿ ಪೂರ್ವಕಾಲೇಜು ಬಿದ್ಕಲ್ ಕಟ್ಟೆ ಮತ್ತು ಬಿದ್ಕಲ್ ಕಟ್ಟೆ ಗ್ರಾಮಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಬಿದ್ಕಲ್ ಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಏಪ್ರಿಲ್ 19 ರಂದು ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು .ಐ.ಟಿ.ಐ.ಸಂಸ್ಥೆಯ ಪ್ರಾಂಶುಪಾಲರಾದ ಗಂಗಾಧರಪ್ಪ ರವರು ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರ್ಕಾರಿ ಪದವಿ ಪೂರ್ವಕಾಲೇಜು ಬಿದ್ಕಲ್ಕಟ್ಟೆ ಇದರ ರಾಜ್ಯ ಶಾಸ್ತ್ರ ಉಪನ್ಯಾಸಕರು ಹಾಗೂ ಸೆಕ್ಟರ್ ಅಧಿಕಾರಿಗಳಾದ ಶ್ರೀ ರಾಘವೇಂದ್ರ ಕಿಣಿ ಮತದಾನದ ಮಹತ್ವ ಕುರಿತು ಮಾತನಾಡಿದರು .
ಮುಖ್ಯ ಅತಿಥಿಗಳಾಗಿ ಗ್ರಾ.ಪ.ಪಿ.ಡಿ.ಓ.ಶ್ರೀಮತಿ ರೇಖಾ ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು. J.T.O.ಹಾಗೂ ಇ .ಎಲ್.ಸಿ.ಸಂಚಾಲಕರಾದ ಶ್ರೀ ಗಣೇಶ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹೊಸ ಮತದಾರರು ಉಪಸ್ಥಿತರಿದ್ದರು .ಪ್ರಾಂಶುಪಾಲರಾದ ಶ್ರೀ ಗಂಗಾಧರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.ಜೆ .ಟಿ.ಓ.ಶ್ರೀಮತಿ ಪ್ರಪುಲ್ಲಾ ವಂದಿಸಿದರರು.. ವಿಶೇಷವಾಗಿ ಹೊಸ ಮತದಾರರೊಂದಿಗೆ ಸಂವಾದ ಏರ್ಪಾಡಾಗಿತ್ತು.