ಕುಂದಾಪುರ (ಮೇ, 2): ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ, ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ, ಕುಂದಾಪುರ ಮತ್ತು ಜೆಸಿಐ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಜೆಸಿಐ ಭವನದಲ್ಲಿ ಮೇ 1. ರ ಶನಿವಾರದಂದು ರಕ್ತದಾನ ಶಿಬಿರ ನಡೆಯಿತು.
ಈ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಯಶ್ ಪಾಲ್ ಸುವರ್ಣ ಉದ್ಘಾಟಸಿ ಶುಭ ಹಾರೈಸಿದರು. ಕೋವಿಡ್ ಎರಡನೆಯ ಅಲೆಯ ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣ ಎಂದು ಅವರು ಹೇಳಿದರು.
ರೆಡ್ ಕ್ರಾಸ್ ಕುಂದಾಪುರದ ಸಭಾಪತಿ ಶ್ರೀ ಜಯಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಜೇಸಿಐ ಕುಂದಾಪುರದ ಮಾಜಿ ಅಧ್ಯಕ್ಷ ಶ್ರೀ ಸದಾನಂದ ನಾವಡ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಶ್ರೀ ಪ್ರಕಾಶ್ ಕುಕ್ಕೆಹಳ್ಳಿ, ಹಿ.ಜಾ ವೇ ಜಿಲ್ಲಾ ಸಂಪರ್ಕ ಪ್ರಮುಖ್ ಚಂದ್ರ ಶಿರಿಯಾರ, ವಾಸುದೇವ ಗಂಗೊಳ್ಳಿ, ಹೆಲ್ಪಿಂಗ್ ಹ್ಯಾಂಡ್ ಕುಂದಾಪುರದ ಅಧ್ಯಕ್ಷ ಪ್ರದೀಪ ಮೊಗವೀರ, ಅಭಯ ಹಸ್ತ ಹೆಲ್ಪ್ ಲೈನ್ ಅಧ್ಯಕ್ಷರಾದ ಶ್ರೀ ಸತೀಶ್ ಸಾಲ್ಯಾನ್, ರಕ್ತದಾನಿ ಬಳಗ ಕುಂದಾಪುರ ದ ಗುರುಪ್ರಸಾದ್ ಖಾರ್ವಿ, ಚರಣ್ ಗಂಗೊಳ್ಳಿ , ರೆಡ್ ಕ್ರಾಸ್ ಕುಂದಾಪುರದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ,ಕೋಶಾಧಿಕಾರಿ ಶಿವರಾಮಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ ಡಿ’ಕೋಸ್ಟಾ, ಹಿಂದು ಜಾಗರಣ ವೇದಿಕೆ ಗಂಗೊಳ್ಳಿಯ ನವೀನ್ ಗಂಗೊಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸತೀಶ ಸಾಲಿಯಾನ್ ಸ್ವಾಗತಿಸಿದರು. ಪ್ರವೀಣ್ ಯಕ್ಷಿಮಠ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಬಿರದಲ್ಲಿ ಒಟ್ಟು 116 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.