ನಾಗೂರು( ಜ.6): ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರಿಂದಾಗಿ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಭಾರತೀಯ ಸೇನೆ ಯುವಕರಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸುವ ಭರಪೂರ ಪ್ರಯತ್ನ ಮಾಡುತ್ತದೆ.ಅಂತಹ ಅತ್ಯುತ್ತಮ ತರಬೇತಿ ವ್ಯವಸ್ಥೆ ನಮ್ಮ ಸೇನೆಯಲ್ಲಿದೆ. ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆದ ಲೇಖಕ, ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕರ ನಿತ್ಯ ಬದುಕಿನ […]
Category: ಕವನ/ಹನಿಗವನ/ಚಿತ್ರಗವನ
ಕುಂದಾಪ್ರ ಕನ್ನಡ —> ಕವನ/ಹನಿಗವನ/ಚಿತ್ರಗವನ
“ದೇಗುಲವೀ ದೇಹ”
ಹೃದಯವು ಬಲೂನಲ್ಲ ….ಆದರೂ ಗಾಳಿ ತುಂಬಿಸಿಕೊಳ್ಳುತ್ತೆರಕ್ತವು ನೀರಲ್ಲ …ಆದರೂ ದೇಹದೊಳಗೆ ಹರಿಯುತ್ತಿರುತ್ತೆಹೊಟ್ಟೆಯು ಚೀಲವಲ್ಲ…ಆದರೂ ಆಹಾರ ತುಂಬಿಸಿಕೊಳ್ಳುತ್ತೆಕೈಕಾಲುಗಳು ಯಂತ್ರವಲ್ಲ…ಆದರೂ ಪ್ರತಿಕ್ಷಣವೂ ಚಲನೆಯಲ್ಲಿರುತ್ತೆ ಎಲುಬುಗಳು ಕಬ್ಬಿಣವಲ್ಲ …ಆದರೂ ದೇಹಕ್ಕೆ ರಕ್ಷಣೆ ನೀಡುತ್ತೆಕೈ-ಬೆರಳುಗಳು ಅಳತೆಯ ಕೋಲಲ್ಲ…ಆದರೂ ಅಳತೆಗೆ ಉಪಯೋಗವಾಗುತ್ತೆಚರ್ಮ ಕಂಬಳಿಯಲ್ಲ…..ಆದರೂ ಬಿಸಿಲು ಮಳೆ ಚಳಿಗೆ ಕವಚವಾಗುತ್ತೆಕಣ್ಗಳೆರಡು ಸಮುದ್ರವಲ್ಲ….ಆದರೂ ದುಃಖದಿ ಉಕ್ಕಿ ಹರಿಯುತ್ತೆಮೆದುಳು ಸಾಧನವಲ್ಲ… ಆದರೂ ದೇಹದಾಂಗವ ಶೋಧಿಸುತ್ತಿರುತ್ತೆ… ಕವನ : ಜಗದೀಶ್ ಮೇಲ್ಮನೆ ಉಪ್ಪುಂದ
••ಯಾರವನು?••
ಅವನೊಂದು ಮಹಾನ್ ಚೇತನ ಹಸಿ ಮಣ್ಣಿಗೆ ನೆತ್ತರ ಸುರಿಸಿಬದುಕನ್ನೇ ಉಳುವವನು….. ಹಸಿದ ಹೊಟ್ಟೆಗೆ ಅನ್ನ ನೀಡಲು ತನ್ನನ್ನೇ ಪಣವಾಗಿಟ್ಟು ನಗುವನು ಕಣ್ಣಂಚಿನ ನೋವಿನ ಕತ್ತು ಹಿಸುಕುತ್ತಾ… ಕಾಣದ ಕನಸಿಗೆ ದಾರಿಯಾಗುವ ಆಸೆ ಬದುಕು ಬರಡಾಗಿರಲು ಭೂಮಿಗೆಲ್ಲಿ ಫಸಲು? ಬಾರದ ಬೆಳೆಗಾಗಿ ದಿನವಿಡೀ ಕಾಯುವನು ಬಹುಶಃ ನಾಳೆಯೂ ಕೂಡಾ!! ಹಸಿಮಣ್ಣ ಎಡೆಯಲ್ಲಿ ಗುಂಡಿತೋಡಿ ಉಸಿರ ಬಚ್ಚಿಡಬಹುದಿತ್ತು ನಿರಾಶಾವಾದಿಯಾಗಿದ್ದಲ್ಲಿ ಆದರೆ ಅವನಲ್ಲ….. ಹಸಿದ […]
ಇಷ್ಟೇನಾ ನಿನ್ನ ಬೆಲೆ…?
ಮನೆ ಮುಂದೆ ಒಲೆ,ಹಸಿ ತೆಂಗಿನ ಗರಿ, ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ,ಬದಿಯಲ್ಲೊಂದು ಸೀಮೆಎಣ್ಣೆ ಡಬ್ಬ, ಸಾಕಾಗದಿದ್ರೆ ಒಂದು ಸ್ವಲ್ಪ ಪೆಟ್ರೋಲು,ಸುರಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿಬೂದಿ..ಬೂದಿ ಈ ನಿನ್ನ ಶರೀರ.ಇಷ್ಟೇನಾ ನಿನ್ನ ಬೆಲೆ…? ಒಂದು ಸಂಜೆ ಪ್ರಾಣ ಪಕ್ಷಿ ಹಾರಿ ಹೋಯಿತು,ತಾನು ಗಳಿಸಿದ್ದು,ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ,ಉಳಿದವರು ತಮಾಷೆ ನೋಡುತ್ತಿದ್ದಾರೆ, ಅರೇ, ಬೇಗನೇ ಎತ್ತಿರಿ,ಕತ್ತಲಾಗುತ್ತ ಬಂತು,ಹೊಟ್ಟೆ ಹಸಿದಿದೆ,ಯಾರು ರಾತ್ರಿಯೆಲ್ಲಾ ಕಾಯುವರು? ಇದು ನೆಂಟರ ನಡುವಿನ ಸಂಭಾಷಣೆ…ಇಷ್ಟೇನಾ ನಿನ್ನ ಬೆಲೆ? ನಾ ಸತ್ತು ಆತ್ಮ ಮೇಲಕ್ಕೆ ಹಾರುತ್ತಿದೆ,ನಕ್ಷತ್ರಗಳ ಮೇಲೆ. […]
•••ಗೆಳೆತನ•••
ಎತ್ತ ಸಾಗುವುದೀ ಪಯಣ ಹೊತ್ತು ಮುಳುಗುವ ಮುನ್ನ ಚಿತ್ತ ಧೃತಿಗೆಡದಿದ್ದರೆ ಸಾಕು ಮತ್ತೆ ಶೋಧಿಸಲು ಸಮಯವಾದೀತು…..!! ಕಳೆದೆವು ಅದೆಷ್ಟೋ ಕ್ಷಣಗಳ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯೇರಿ ಸಾಗಿದಷ್ಟೂ ದೂರ ಸೇರಿದಷ್ಟೂ ದಾರಿ….. ಸವಿದರೂ ಸವೆಯದ ಸ್ನೇಹವ ನೆನೆದು ಅಳುವುದೊಂದೆ ಉಳಿದಿದೆ ಇನ್ನೆಲ್ಲವ ನಾವಾಗಲೇ ಅಳಿಸಿಯಾಗಿದೆ. ಅನಂತತೆಯ ಅಲೆಯೊಂದು ಉದಯಿಸಿದೆ ಎದೆಯೊಳಗೆ ಸಾಗಲು ದೋಣಿ ಹಡಗುಗಳಿಲ್ಲ ಸೇರಲು ಸ್ನೇಹ ಸಂಬಂಧಗಳಿಲ್ಲ ತೀರ ಸಾಗರದಲ್ಲಿ ಒಂಟಿ ನಾನು….. ಮಾತಿನ ಶಿಖರಕ್ಕೀಗ ಮೌನದ ಮೆಟ್ಟಿಲು […]