ಕರೋನ ಎನ್ನುವ ಮಹಾಮಾರಿ ಕಾಯಿಲೆ ಬಂದು ಸರಿಸುಮಾರು ಎರೆಡುವರೆ ವರ್ಷಗಳೆ ಕಳೆದಿದೆ.ಆದರೆ ಅದರ ವಿರುದ್ದ ಹೋರಾಟ ಮಾಡಿ ಜಯಗಳಿಸಲು ನಮಗೆ ಸಾಧ್ಯವಾದಿರುವುದು ವಿಪರ್ಯಾಸವೇ ಸರಿ.
ಅದಕ್ಕೆ ಕಾರಣಗಳು ಹಲವು … ಜನತೆಯ ನಿರ್ಲಕ್ಷ್ಯ, ಸರ್ಕಾರದ ಅವೈಜ್ಞಾನಿಕ ಕಠಿಣ ನಿರ್ಧಾರ ಗಳು ಇತ್ಯಾದಿ.
ಕರೋನ ನಿಯಂತ್ರಿಸುವಲ್ಲಿ ಸರ್ಕಾರ ಮೊದಲ ಅಲೆಯಲ್ಲ ಎಡವಿದೆ ಎನ್ನುವುದರಲ್ಲಿ ಎರೆಡು ಮಾತಿಲ್ಲ .! ಎರೆಡನೆ ಅಲೆ ಬರುವ ಮುನ್ನ ಬೇಕಾದಷ್ಟು ಸಮಯಾವಕಾಶ ಇದ್ದರೂ ಅದನ್ನು ಸದುಪಯೋಗ ಮಾಡಿಕೊಳ್ಳದೆ ಹಲವಾರು ಸಾವು ನೋವುಗಳನ್ನು ಅನುಭವಿಸುವಂತೆ ಮಾಡಿದ್ದು ವಾಸ್ತವ.
ಜನರ ನಿರ್ಲಕ್ಷ್ಯ ಹಾಗೂ ಸರ್ಕಾರಗಳು ತೆಗೆದುಕೊಂಡ ನಿರ್ಧಾರಗಳ ವಿಳಂಬ ನೀತಿಯಿಂದಾಗಿ ಹಳ್ಳಿ ಹಳ್ಳಿಗಳಿಗೆ ಕರೋನ ಹರಡಲು ದಾರಿ ಮಾಡಿಕೊಟ್ಟಂತೆ ಆಗಿದೆ. ಇಂತಹ ತಪ್ಪು ನಿರ್ಧಾರದಿಂದಾಗಿ ಸಾಕಷ್ಟು ಪ್ರಾಣ ಹಾನಿಯಾಗಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಇರುವುದಕ್ಕೆ ಕೆಲವು ಲಂಚಬಾಕ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ನೇರ ಹೊಣೆಯಾಗಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ.ಜಗತ್ತಿಗೆ ಮಾನವೀಯತೆಯ ಪಾಠ ಮಾಡಿದ ನಾವು ಇಂದು ಮ್ರಗೀಯವಾಗಿ ವರ್ತಿಸುತ್ತಿದ್ದೇವೆ.
ಇಷ್ಟು ಸಾಲದು ಎನ್ನುವಂತೆ ಈಗ ಲಾಕಡೌನ ಎನ್ನುವ ಅಸ್ತ ಪ್ರಯೋಗ ಮಾಡಿ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ದೇಶ, ರಾಜ್ಯ ಊರು -ಕೇರಿ ಹಬ್ಬಿದ ನಂತರ ಕರೋನ ಇಂದು ರುರ್ದನರ್ಥನದ ರಣ ಕೇಕೆ ಹಾಕುತ್ತಿದ್ದೆ. ಬಡ ಮಧ್ಯಮ ವರ್ಗದವರಿಗೆ ಜೀವನ ನಿರ್ವಹಣೆಗೆ ಕಷ್ಟ ಇರುವ ಇಂತಹ ಸಂದರ್ಭದಲ್ಲಿ ಸರ್ಕಾರ ಸಣ್ಣ ಭರವಸೆಯನ್ನು ನೀಡದೆ ಸರ್ಕಾರ ಪೋಲಿಸರಿಗೆ ಲಾಠಿ ನೀಡಿ ಲಾಕ್ಡೌನ್ ಮಾಡಿರುವುದು ಬಡ-ಮಧ್ಯಮ ವರ್ಗದವರನ್ನು ಕತ್ತುಹಿಸುಕಿ ಕೊಂದಂತೆ ಆಗಿದೆ .
ದಿನದ ಬದುಕು ದುಡಿದು ತಿನ್ನುವ ಲಕ್ಷಾಂತರ ಬಡ ಕುಟುಂಬಗಳ ಬದುಕು ಶೋಚನೀಯವಾಗಿದೆ. ಹಲವಾರು ಅಸಂಘಟಿತ ವಲಯಗಳ ಕಾರ್ಮಿಕರ ಪಾಡು ಹೇಳ ತಿರದು. ಹಿಂದಿನ ಲಾಕ್ಡೌನ್ ಸಂದರ್ಭದಲ್ಲಿ ಹೊಟ್ಟೆಯ ಹಸಿವು ತಣಿಸಿಕೊಳ್ಳಲು ಮಾಡಿದ ಸಾಲವನ್ನು ತೀರಿಸುವ ಮುನ್ನ ಮರಳಿ ಬಂದ ಲಾಕ್ಡೌನ್ ಜನರು ಔಷಧೋಪಚಾರ ಸಿಗದೆ ಸಾಯುವರಿಕ್ಕಿಂತ ಹಸಿವು ತಾಳಲಾಗದೆ ಸಾಯುವವರ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಬಡ ಮಧ್ಯಮ ವರ್ಗಗಳ ಬಗ್ಗೆ ಗಮನ ಹರಸಲಿ…. ಬದುಕಿಸುವ ಪ್ರಯತ್ನ ನೆಡೆಯಲಿ ಎನ್ನುವುದು ನನ್ನ ಕಾಳಜಿ.
ಎ .ಎಸ್ ಪೂಜಾರಿ, ಕಾಡಿನಕಲ್ಲು
ಇಡೂರು ಕುಂಜ್ಞಾಡಿ