ಬೈಂದೂರು (ಮೇ,13): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾಲಕ್ಷ್ಮೀ ಹೆಚ್. ಎಸ್ ರವರು ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಯವರ ಗೃಹಕಛೇರಿಗೆ ಮೇ 13ರಂದು ಭೇಟಿ ನೀಡಿದರು. ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾ ಲಕ್ಷ್ಮಿ ಹೆಚ್ ರವರನ್ನು ಶಾಸಕರು ಶುಭ ಹಾರೈಸಿ ತಾಲೂಕಿನ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕೋವಿಡ್ ನಿರ್ವಹಣೆ ಹಾಗೂ ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗವಾಗಿರುವ ಬೈಂದೂರು ಕ್ಷೇತ್ರದ ಜನತೆಯ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಶೀಘ್ರವೇ ಸ್ಪಂದಿಸುವುದರ ಜೊತೆಗೆ ಈಗಾಗಲೇ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಶಾಸಕರು ನೂತನ ತಹಶೀಲ್ದಾರರಿಗೆ ತಿಳಿಸಿದರು.