ಕುಂದಾಪುರ (ಮೇ. 15) : ತೌಖ್ತೇ ಚಂಡಮಾರುತ ಅಬ್ಬರ ಕರಾವಳಿ ಭಾಗದ ಕಡಲ ತೀರದಲ್ಲಿ ಅಪಾರ ಹಾನಿಯನ್ನು ಉಂಟುಮಾಡಿದ್ದು,ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.. ದಿನದಿಂದ ದಿನಕ್ಕೆ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕಡಲತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ.
ಮೇ 15ರ ಸಂಜೆ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ ಪೂಜಾರಿ ಹಾಗೂ ಸದಸ್ಯ ಪ್ರಭಾಕರ್ ಯಾನೆ ಪ್ರಕಾಶ್ ಕಾಂಚನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ನಾರಾಯಣ ಮೊಗವೀರ, ರವಿ ಶ್ರೀಯಾನ್, ನಾಗರಾಜ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.