ಕುಂದಾಪುರ(ಅ,10): ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರಿನ ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ಚಿರತೆಯು ಮಾಸ್ತಿಯವರ ಮನೆಯ ಆವರಣವಿಲ್ಲದ ಬಾವಿಗೆ ಬಿದ್ದಿದ್ದು ಸೋಮವಾರ ಬೆಳಿಗ್ಗೆ ಮನೆಯವರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯವರು ಬೋನನ್ನು ಬಾವಿಗೆ ಇಳಿಬಿಟ್ಟು ನಾಜೂಕಾಗಿ ಕಾರ್ಯಾಚರಣೆ ನಡೆಸಿ ಅಂದಾಜು 4-5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ […]
Day: October 10, 2022
ಎಕ್ಸಲೆಂಟ್ ಪಿ ಯು ಕಾಲೇಜು ಕುಂದಾಪುರ: ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆ
ಕುಂದಾಪುರ( ಅ,10): 2022-23ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯು ಅಕ್ಟೋಬರ್ 7 ಮತ್ತು 8 ರಂದು ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಬಿಡದಿ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು ಕುಂದಾಪುರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ದೇವಾಡಿಗ ಮತ್ತು ನಿಹಾಲ್ ಎನ್ ಶೆಟ್ಟಿ ಉಡುಪಿ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ದ್ವಿತೀಯ […]
ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಸರ್ವ ಜಿಷ್ಟು
ಕುಂದಾಪುರ(ಅ,10): ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು ಇವರ ಜಂಟಿ ಆಯೋಜನೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಮಟ್ಟದ ಹಾಲಾಡಿ ಸಂಯೋಜಕ ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಶಾಲೆ ಹಾಗೂ ಕುಂದಾಪುರ ಟ್ರಾಕ್ & ಫೀಲ್ಡ್ ಅಥ್ಲೆಟಿಕ್ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಸರ್ವ ಜಿಷ್ಟು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಅವನಿ ಪ್ರಕಾಶನ ಮಂಗಳೂರು : ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಮಂಗಳೂರು (ಅ.10): ಅವನಿ ಪ್ರಕಾಶನ, ಮಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕುಂದಗನ್ನಡದ ನನ್ನ ಊರು – ಜನ – ಸಂಸ್ಕೃತಿ – ಪರಂಪರೆ” ಎನ್ನುವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಹೈಸ್ಕೂಲ್ ವಿಭಾಗ,ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ,ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ , ತೃತೀಯ ಮತ್ತು ಮೂರು ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ […]
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ: ಆರೋಗ್ಯ ಶಿಬಿರ ಸಂಪನ್ನ
ಬೈಂದೂರು(ಅ,10): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕದ ನೇತೃತ್ವದಲ್ಲಿ ನಾಡೋಜ ಡಾ. ಜಿ. ಶಂಕರ್ ಜನ್ಮದಿನದ ಪ್ರಯುಕ್ತ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ ಮತ್ತು ಕೆ ಎಮ್ ಸಿ ಮಣಿಪಾಲ ಇವರ ಸಹಯೋಗದಲ್ಲಿ ಚರ್ಮ, ಕಿವಿ, ಮೂಗು ಹಾಗೂ ಗಂಟಲಿನ ಉಚಿತ ತಪಾಸಣಾ ಶಿಬಿರ ಅ .09 ರಂದು ಸಂಪನ್ನಗೊಂಡಿತು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುನ್ನೂರಕ್ಕೂ […]