ಪ್ರಕೃತಿ ಮಾನವ ಸೇರಿದಂತೆ ಇಡೀ ಜೀವಿ ಸಂಕುಲಕ್ಕೆ ದೇವರು ನೀಡಿಡ ಮಹತ್ವ ಪೂರ್ಣವಾದ ಕೊಡುಗೆ.ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಮನುಜ ತನ್ನ ಸ್ವಾರ್ಥ ಸಾಧನೆಗೆ ಪ್ರಕೃತಿಯನ್ನು ನಾಶ ಮಾಡುತ್ತಾ
ಹೋಗುತ್ತಿದ್ದಾನೆ.
ದುರ್ದೈವದ ಸಂಗತಿ ಎನೆಂದರೆ ಪ್ರಕೃತಿ ನಾಶಕ್ಕೆ ಪ್ರತಿಯಾಗಿ ದೊಡ್ಡ ಬೆಲೆ ತೆತ್ತ ಬೇಕಂತ ಮನುಜನಿಗೆ ಗೊತ್ತೇ ಇಲ್ಲ. ಪ್ರಕೃತಿಯಿಂದ ನಾವೋ .. ಇಲ್ಲ ನಮ್ಮಿಂದ ಪ್ರಕ್ರತಿಯೋ, ಇದನ್ನ ಅರ್ಥ ಮಾಡಿಕೊಳ್ಳುವ ವೇಳೆಗೆ ಇಡೀ ಮಾನವ ಸಂಕೂಲವೆ ನಶಿಸಿ ಹೋಗುವ ಸ್ಥಿತಿಗೆ ತಲುಪುತ್ತದೆ.
ಮನುಷ್ಯ ನೀರು,ಗಾಳಿ ಸೇರಿದಂತೆ ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡುವುದರ ಜೊತೆಗೆ ವ್ಯರ್ಥ ಮಾಡುತ್ತಿದ್ದಾನೆ. ನೀರಿಲ್ಲದ ನಿರ್ಜಲ ಸ್ಥಿತಿ ಉಂಟಾದಾಗ ಪ್ರಕೃತಿಗೆ ಶರಣಾಗುತ್ತಾನೆ, ಪ್ರಕ್ರತಿಯು ತನ್ನ ವಿಕೋಪದಿಂದಾಗಿ, ಸಮುದ್ರದ ಅಲೆಗಳು ಗೋಗರತೆಯಿಂದ ಅಪ್ಪಳಿಸಿದಾಗ ಮನುಜನಿಗೆ ನೆಲೆಯೂರಲು ಜಾಗವಿರಲ್ಲ.
ಮಳೆ,ಗಾಳಿ, ನೀರು,ಪಕ್ಷಿ,ಪ್ರಾಣಿ, ಯಾವುದಕ್ಕೂ ಮಾತಾಡುವ ಶಕ್ತಿ ಇಲ್ಲ, ಆದರೆ ಶಕ್ತಿಯ ಪರಿಪೂರ್ಣತೆಯನ್ನು ಹೊಂದಿರುತ್ತವೆ. ಓ ಮಾನವ ನಾನು.. ನಾನು ಎಂಬುವುದನ್ನು ಬಿಡು, ಎಲ್ಲರಲ್ಲೂ ಒಬ್ಬನಾಗಿ ಬಾಳು.
ಸ್ನೇಹಿತರೆ,ನಾನು 4 ನೆ ತರಗತಿಯಲ್ಲಿರುವಾಗ ನನಗೆ ನನ್ನ ಗುರುಗಳು ಒಂದು ಚಾರ್ಟ್ ಬಗ್ಗೆ ಹೇಳಿದ್ದರು, ಮಿಡತೆ ಹುಲ್ಲನ್ನು ತಿನ್ನುತ್ತೆ, ಕಪ್ಪೆ ಮಿಡತೆ ಯನ್ನು ತಿನ್ನುತ್ತೆ, ಹಾವು ಕಪ್ಪೆಯನ್ನು ತಿನ್ನುತ್ತೇ, ಹದ್ದು ಹಾವನ್ನು ತಿನ್ನುತ್ತೆ ಎಂದು, ಆದರೆ ಇವೆಲ್ಲವನ್ನೂ ನೋಡುತ್ತಾ ಇರುವ ಮಾನವನನ್ನು ಪ್ರಕೃತಿ ತಿನ್ನುತ್ತಾ ಇದೆ.
ಇಂದು ಒಂದು ದಿನದ ಆಮ್ಲಜನಕದ ಬೆಲೆ ಸಾವಿರ ಸಾವಿರ ದುಡ್ಡು ಕೇಳುತ್ತಾರೆ. ಅದೇ ಇಷ್ಟು ವರ್ಷಗಳ ಕಾಲ ನಮಗೆ ಉಚಿತವಾಗಿ ಆಮ್ಲಜನಕ ಕೊಟ್ಟ ಪ್ರಕೃತಿ ಒಂದು ರೂಪಾಯಿ ಕೇಳಲಿಲ್ಲ. ಇವಾಗಲಾದರು ತಿಳಿದುಕೋ ಮನುಜ…. ,ಜಾತಿ, ಧರ್ಮ, ಎಂದು ಹೋರಾಡಿದ ನಿನಗೆ ಏನು ಫಲಿಸಿತು.. ಇನ್ನಾದರೂ ಪ್ರಕೃತಿ ರಕ್ಷಿಸಲು ಹೋರಾಡು……. .
ಶರತ್ MCL
ಮುದೂರು
Super ageda