ಹೆಮ್ಮಾಡಿ ( ಆ .05): ಸಾಮಾಜಿಕವಾಗಿ ಬಹುನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅವರ 70ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗುತ್ತಿದೆ.


ಡಾ.ಜಿ.ಶಂಕರ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಜಾತಿಮತ ಧರ್ಮಬೇಧವಿಲ್ಲದೆ ಅಹರ್ನಿಶಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡು ಕಂಡ ಅದ್ವಿತೀಯ ಕೊಡುಗೈದಾನಿಯಾಗಿ, ಕಲೆ ಸಾಹಿತ್ಯ ಪೋಷಕರಾಗಿ, ಮೊಗವೀರ ಸಮಾಜದ ಪರಿವರ್ತನೆಯ ಹರಿಕಾರರಾಗಿ ಮೂಡಿಬಂದ ಆದರ್ಶವ್ಯಕ್ತಿ. ಇಂಥಹ ಆದರ್ಶವ್ಯಕ್ತಿಯ ಸಾರ್ಥಕ 70ನೇ ಹುಟ್ಟುಹಬ್ಬವನ್ನು ಹೆಮ್ಮಾಡಿಯ ಮತ್ಸö್ಯಜ್ಯೋತಿ ಸಭಾಂಗಣದಲ್ಲಿ ‘ಜಿ.ಎಸ್.70’ ಹೆಮ್ಮಾಡಿ ನೇತೃತ್ವದಲ್ಲಿ ವಿನೂತನವಾಗಿ ಆಚರಿಸಿಕೊಳ್ಳಲಾಯಿತು.


‘ಜಿ.ಎಸ್.70’ ಎನ್ನುವ ಶೀರ್ಷಿಕೆಯಲ್ಲಿ ಸಮಾನಮನಸ್ಕರು ಸೇರಿ ವಿಶಿಷ್ಟವಾದ ಕಾರ್ಯಕ್ರಮವನ್ನು ರೂಪಿಸಿದ್ದು ಊಹೆಗೂ ನಿಲುಕದ್ದು. ‘ಜಿ.ಎಸ್.70’ ಕಾರ್ಯಕ್ರಮದ ಶೀರ್ಷಿಕೆಯೇ ಸೂಚಿಸುವಂತೆ ವಿವಿಧ ಕ್ಷೇತ್ರದಲ್ಲಿ ಆದರ್ಶಯುತ ಸೇವೆ ನೀಡಿದ 70 ಜನ ಸಾಧಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ನಾಡೋಜ ಡಾ.ಜಿ.ಶಂಕರ್ 70ನೇ ಹುಟ್ಟುಹಬ್ಬವನ್ನು ಅವರ ಆಶಯದಂತೆ ಮೌಲ್ಯಯುತವಾಗಿ ಆಚರಿಸಲಾಯಿತು.
ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಚಾರ ಬಯಸದೆ ಸೇವೆ ಸಲ್ಲಿಸುತ್ತಿರುವ 70 ಸಾಧಕರನ್ನು ಗುರುತಿಸಿದ್ದು ಕೂಡಾ ಒಂದು ಸಾಹಸವೇ ಸರಿ. 70 ಸಾಧಕರ ಕಿರು ಪರಿಚಯದೊಂದಿಗೆ ಸನ್ಮಾನಿಸಿದ್ದು ಕೂಡಾ ವಿಶಿಷ್ಟವಾಗಿಯೇ. ಯಾವುದೇ ಭಾಷಣ, ಅತಿಥಿಗಣ್ಯರು, ದೀರ್ಘ ವೇದಿಕೆ ಕಾರ್ಯಕ್ರಮವಿಲ್ಲ, ಸ್ವಾಗತ, ಪ್ರಾಸ್ತಾವನೆಯ ಬಳಿಕ ಸನ್ಮಾನ. ಇನ್ನೊಂದು ವಿಶೇಷವೆಂದರೆ 70 ಜನ ಸಂಘಟಕರು ಏಳು ತಂಡಗಳನ್ನು ರಚಿಸಿ ತಲಾ ಹತ್ತು ಸದಸ್ಯರು ಹತ್ತು ಜನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಜವಬ್ದಾರಿ ವಹಿಸಲಾಗಿತ್ತು. ಅವರೇ ತಮಗೆ ವಹಿಸಿದ ಸಾಧಕರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸುವ ವಿಶಿಷ್ಠವಾದ ಕಲ್ಪನೆ ಇದು. ಸನ್ಮಾನಿತರೊಂದಿಗೆ ಸನ್ಮಾನಿಸಿದ ತಂಡದವರೇ ಉಪಸ್ಥಿತರಿರುವುದು ವಿಶೇಷ. ಇಂಥಹ ಕಲ್ಪನೆ-ಪರಿಕಲ್ಪನೆಗಳೇ ವಿಶಿಷ್ಟ ಹಾಗೂ ವಿನೂತನ.


ಈ ಎಲ್ಲಾ ಆಲೋಚನೆಗಳ ಪ್ರೇರಕಶಕ್ತಿ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕ ಅಧ್ಯಕ್ಷ, ಪ್ರಸ್ತುತ ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನಾಡೊಜ ಡಾ.ಜಿ.ಶಂಕರ ನಾಡುಕಂಡ ಅಪರೂಪದ ವ್ಯಕ್ತಿ. ಶ್ರೇಷ್ಟ ಮಾನವತಾವಾದಿ. ಸಮಷ್ಠಿ ಸಮಾಜದ ಅಭ್ಯುದಯ, ಪರಿವರ್ತನೆಯ ಕನಸು ಕಂಡು ಕಾರ್ಯೋನ್ಮುಖರಾದವರು. ಜಾತಿ, ಮತ, ಧರ್ಮ ಪರಿಧಿ ಹಾಕಿಕೊಳ್ಳದೆ ಬಡವರು, ದುರ್ಬಲರಿಗಾಗಿ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿ ಯಶಸ್ಸು ಕಂಡವರು. ಶಿಕ್ಷಣ, ಸಾಮಾಜಿಕ, ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದು. ಎಲ್ಲ ವರ್ಗದವರ ಸಾಧನೆಯನ್ನು ಖುಷಿ ಪಡುವ ಅವರು ಎಲ್ಲರೂ ಕೂಡಾ ಸಾಧಕರಾಗಬೇಕು ಎಂಬ ವಿಶಾಲ ಮನೋಭಾವ ಉಳ್ಳವರು. ಅವರ ಆಶಯದಂತೆ 70 ಜನ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದರು

ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಶಾಖಾಧ್ಯಕ್ಷ ಎಂ.ಎo.ಸುವರ್ಣ ಅನಿಸಿಕೆ ಹಂಚಿಕೊoಡರು. ಭಾಸ್ಕರ ಬಟ್ಟೆಕುದ್ರು ಪ್ರಾರ್ಥನೆ ಮಾಡಿದರು. ಬಗ್ವಾಡಿ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜೀವ ಶೆಟ್ಟಿ ಬಗ್ವಾಡಿ ಸನ್ಮಾನಕ್ಕೆ ಪ್ರತ್ಯುತ್ತರ ನೀಡಿದರು. ಲೋಹಿತಾಶ್ಚ ಆರ್.ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ‘ಜಿ.ಎಸ್.70’ ಸದಸ್ಯರು ಉಪಸ್ಥಿತರಿದ್ದರು.

‘ಜಿ.ಎಸ್.70’ ಸನ್ಮಾನಿತರು:
ವ್ಯದ್ಯರಾದ ಡಾ.ಸುಕೀರ್ತಿ ಶೆಟ್ಟಿ ಹೆಮ್ಮಾಡಿ, ಡಾ.ಟಿ.ಸುರೇಶ ಶೆಟ್ಟಿ ನಾಡ, ನಾಟಿ ವೈದ್ಯರಾದ ನಾಗ ನಾಯ್ಕ ನೀರ್ಕೋಡ್ಲು, ರಕ್ತದಾನಿ ವೆಂಕಟೇಶ್ ಕಿಣಿ ಕಟ್ ಬೇಲ್ತೂರು, ಕರೋನಾ ಪ್ರಂಟ್ಲೈನ್ ವಾರಿಯರ್ಸ್ ರಮೇಶ್ ಟಿ.ಟಿ ಆರಾಟೆ, ರಾಷ್ಟ್ರ ಮಟ್ಟದ ಮಹಿಳಾ ಕಬಡ್ಡಿ ಆಟಗಾರ್ತಿ ಶ್ರೀಲತಾ ತ್ರಾಸಿ, ಹಿರಿಯ ದಾದಿ ಗಿರಿಜಾ ದೇವಲ್ಕುಂದ, ಆಶಾ ಕಾರ್ಯಕರ್ತೆ ಸತ್ಯವತಿ ಬಟ್ಟೆಕುದ್ರು, ಶಿಕ್ಷಕ, ರಂಗಕರ್ಮಿ ಸತ್ಯನಾ ಕೊಡೇರಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗದೀಶ್ ಶೆಟ್ಟಿ ಕಟ್ ಬೇಲ್ತೂರು, ನಿವೃತ್ತ ಶಿಕ್ಷಕರಾದ ಮಹಾಲಿಂಗ ಕೊಠಾರಿ ತಲ್ಲೂರು, ಶಿಕ್ಷಕಿ ಸಿಂಗಾರಿ ಮೊಗವೀರ ನಾವುಂದ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಮೆತ್ತಿನಮನೆ ಬಗ್ವಾಡಿ, ನಂದಿ ದೇವಾಡಿಗ ಸುಳ್ಸೆ, ಅಂಗನವಾಡಿ ಕಾರ್ಯಕರ್ತೆ ಗೀತಾ ಆಚಾರ್ ತ್ರಾಸಿ, ಅಂತರಾಷ್ಟ್ರೀಯ ಕ್ರೀಡಾಪಟು ಲಕ್ಸ್ ರಾಜೇಶ್ ಆರಾಟೆ, ಪ್ರತಿಭಾನ್ವಿತ ವಿಶೇಷಚೇತನ ವಿದ್ಯಾರ್ಥಿನಿ ಸಮೀಕ್ಷಾ ಎಸ್.ಎಮ್ ತೊಪ್ಲು, ಭದ್ರಮಹಾಕಾಳಿ ದೈವಸ್ಥಾನದ ಚಂದ್ರ ನಾಯ್ಕ್ ಕಟ್ ಬೇಲ್ತೂರು, ಹಾಡಿಗರಡಿ ದೈವಸ್ಥಾನದ ಅಧ್ಯಕ್ಷ ನಾಗೇಶ್ ಪಿ.ಕಾಂಚನ್, ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯಸ್ಥ ತಿಮ್ಮ ದೇವಾಡಿಗ, ಅಂಚೆ ಇಲಾಖೆಯ ಚಂದ್ರ ಪೂಜಾರಿ ಹಟ್ಟಿಯಂಗಡಿ, ಬಗ್ವಾಡಿ ದೇವಸ್ಥಾನದ ಅರ್ಚಕರಾದ ಗಿರೀಶ್ ಭಟ್, ಕುಂದಾಪುರ ತಾಲೂಕು ಭಜನಾ ಒಕ್ಕೂಟ ಮಾಜಿ ಅಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ, ಹಿರಿಯ ಭಜನಾಪಟು ದಿನೇಶ ಬೀಜಾಡಿ, ಯುವ ಭಜನಪಟು ಚಿನ್ಮಯ್ ಕಾಂಚನ್ ಬಟ್ಟೆಕುದ್ರು, ಮುಳುಗು ತಜ್ಞ ದಿನೇಶ ಖಾರ್ವಿ ಗಂಗೊಳ್ಳಿ, ಮುಳುಗು ತಜ್ಞ ಮಂಜುನಾಥ ನಾಯ್ಕ್ ಕೊಡ್ಲಾಡಿ, ಗುರಿಕಾರ ಕೃಷ್ಣ ಮೊಗವೀರ ಅರಾಟೆ, ನರಸಿಂಹ ಮೊಗವೀರ ಆಜ್ರಿ ಬೆಳ್ಳಾಲ, ಅನಂತ ಡಿ.ತೋಳಾರ್ ಬಟ್ಟೆಕುದ್ರು, ನಿವೃತ್ತ ಯೋಧರಾದ ದಿನೇಶ ಆಚಾರ್ ಆಲೂರು, ನಾರಾಯಣ ಬಿಲ್ಲವ ಹೆಮ್ಮಾಡಿ, ಸಾಮಾಜಿಕ ಕಾರ್ಯಕರ್ತ ಪುರುಷೋತ್ತಮ ಶೇರಿಗಾರ್ ಚಿಕ್ಕನಸಾಲು, ಬಾಬು ಮೊಗವೀರ ಹೆಮ್ಮಾಡಿ, ಭಜನಾಪಟು ಭಾಸ್ಕರ ಬಟ್ಟೆಕುದ್ರು, ಪತ್ರಕರ್ತ ನಾಗರಾಜ್ ವಂಡ್ಸೆ ಬಳಗೇರಿ, ಹಿರಿಯ ಮಹಿಳಾ ಬಳೆಗಾರರಾದ ಗೌರಿ ಬಳೆಗಾರ್ ಕಟ್ ಬೇಲ್ತೂರು, ಯುವ ಸೇವೆಯಲ್ಲಿ ಮಹಾವಿಷ್ಣು ಯುವಕ ಮಂಡಲದ ನರಸಿಂಹ ಗಾಣಿಗ ಹರೆಗೋಡು, ನಂದ್ಯಪ್ಪ ಶೆಟ್ಟಿ ಬಗ್ವಾಡಿ, ಹಿರಿಯ ಯಕ್ಷಗಾನ ಕಲಾವಿದ ರಮೇಶ ಮೊಗವೀರ ಕಟ್ ಬೇಲ್ತೂರು, ಹಿರಿಯ ಯಕ್ಷಗಾನ ಕಲಾವಿದ ಸುರೇಂದ್ರ ಮೊಗವೀರ ಆಲೂರು, ಚಿತ್ರ ಕಲಾವಿದರಾದ ರಾಘವೇಂದ್ರ ಮೊಗವೀರ ಕೊಡ್ಲಾಡಿ, ಯಕ್ಷಗಾನ ಪೋಷಕ ಚಂದ್ರ ಮೊಗವೀರ ಕಂಡ್ಲೂರು, ಕ್ರೀಡಾಪಟು ಸಿಂಚನ ಕೊಲ್ಲೂರು, ನವ್ಯ ಕೊಲ್ಲೂರು, ಶರಣ್ಯ ನೆಂಪು, ನಿವೃತ್ತ ಶಿಕ್ಷಕ ಶಂಕರ ಮಡಿವಾಳ ಹೆಮ್ಮಾಡಿ, ರಜತ ಶಿಲ್ಪಕಲೆಯಲ್ಲಿ ನಾಗರಾಜ ಆಚಾರ್ಯ ಬಗ್ವಾಡಿ, ಕಿರುತೆರೆ ಹಾಗೂ ರಂಗಭೂಮಿ ಹಾಸ್ಯಕಲಾವಿದ ಪ್ರಸಾದ್ ಜೋಗಿ ಹಕ್ಲಾಡಿ, ಯೋಗಪಟು ಸಂದೀಪ್ ಪೂಜಾರಿ ತ್ರಾಸಿ, ಸಾರ್ವಜನಿಕ ಸೇವೆಯಲ್ಲಿ ಪೌರ ಕಾರ್ಮಿಕ ವಸಂತ್ ತಲ್ಲೂರು, ರಾಮು ಹೊಸಾಡು, ಪೋಸ್ಟ್ ಮ್ಯಾನ್ ಶಂಕರ ಪೂಜಾರಿ ಹೆಮ್ಮಾಡಿ, ಮೈನ್ ಮ್ಯಾನ್ ಪಂಜು ಪೂಜಾರಿ ತೊಪ್ಲು ಹಕ್ಲಾಡಿ, ಮಹಿಳಾ ಮೀನು ವ್ಯಾಪಾರಿಗಳಾದ ರಕ್ಕು ಮೊಗವೀರ ಕೂಕನಾಡು, ಶಾರದಾ ಮೊಗವೀರ ತೊಪ್ಲು, ಭದ್ರಿ ಮೊಗವೀರ ಬಟ್ಟೆಕುದ್ರು, ಪರಮೇಶ್ವರಿ ಮೊಗವೀರ ಉಪ್ಪಿನಕುದ್ರು, ಸರಸ ಮೊಗವೀರ ಹಟ್ಟಿಯಂಗಡಿ ಗುರಿಕಾರ ಬಸವ ಅಂಬ್ಲಾಡಿ ಕಟ್ ಬೇಲ್ತೂರು ಹಾಗೂ ಹಿರಿಯ ದಂಪತಿಗಳಾದ ಶ್ರೀಮತಿ ಪದ್ಮಾವತಿ ಮತ್ತು ಶೀನ ವಿ.ಮೊಗವೀರ ಕಟ್ ಬೇಲ್ತೂರು, ಶ್ರೀಮತಿ ಜಯಂತಿ ಶೆಟ್ಟಿ ಮತ್ತು ಸೂಲಿಯಣ್ಣ ಶೆಟ್ಟಿ ಬಗ್ವಾಡಿ, ಶ್ರೀಮತಿ ಪದ್ದು ಮತ್ತು ನಾಗ ನಾಯ್ಕ ಜೋಗ್ಯಾಡಿ ವಂಡ್ಸೆ, ಶ್ರೀಮತಿ ಕುಸುಮ ಮೇಸ್ತ ಮತ್ತು ವಸಂತ ಮೇಸ್ತ ಗುಜ್ಜಾಡಿ, ಶ್ರೀಮತಿ ಪದ್ಮಾವತಿ ಮತ್ತು ಸಂಜೀವ ಮೊಗವೀರ ಗುಲ್ವಾಡಿ ಇವರುಗಳನ್ನು ಸನ್ಮಾನಿಸಲಾಯಿತು.











