ಹೆಮ್ಮಾಡಿ (ಮೇ, 23): ಹೌದು, ಕರೋನಾ ಆತಂಕದಿಂದ ಭಯಭೀತರಾಗುವ ಜನರ ನಡುವೆ ಇದೊಂದು ಪಾಸಿಟಿವ್ ಸ್ಟೋರಿ. ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಎಂಬ ಗ್ರಾಮದ ಶಂಕರ್ ನಾಯ್ಕ್ ಎನ್ನುವವರ ಕುಟುಂಬದ 9 ಮಂದಿ ಸದಸ್ಯರು ಕೊರೋನ ಪಾಸಿಟಿವ್ ಗೆ ತುತ್ತಾಗಿದ್ದರು. ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬ ಎಲ್ಲಾ ಸದಸ್ಯರಿಗೂ ಕೊರೋನಾ ಅಂಟಿಕೊಂಡಿತ್ತು. ಆದರೆ ಈ ಕುಟುಂಬದ ಸದಸ್ಯರು ಧ್ರತಿಗೆಡದೆ ಧೈರ್ಯದಿಂದ ಕರೋನಾ ಗೆದ್ದು ಗುಣಮುಖರಾಗಿದ್ದಾರೆ.
ಆತ್ಮಸ್ಥೈರ್ಯದ ಜೊತೆ ವೈದ್ಯರು ನೀಡಿದ ಸಲಹೆಗಳನ್ನು ಈ ಕುಟುಂಬದ ಸದಸ್ಯರು ಚಾಚು ತಪ್ಪದೇ ಪಾಲಿಸಿರುವುದು ಯಶಸ್ಸಿನ ಗುಟ್ಟು ಎಂದು ತಿಳಿದುಬಂದಿದೆ. ಕೊರೋನಾ ಪಾಸಿಟಿವ್ ಆದ ವ್ಯಕ್ತಿ ಯಾವುದೇ ಕಾರಣಕ್ಕೂ ಮಾನಸಿಕವಾಗಿ ಹಿಂಜರಿಯಬಾರದು, ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸಿದರೆ ಯಾರೂ ಕೂಡ ಕೊರೋನಾವನ್ನು ಗೆಲ್ಲಬಹುದು ಎನ್ನುತ್ತಾರೆ ಶಂಕರ್ ನಾಯ್ಕ್ ಕುಟುಂಬದ ಸದಸ್ಯರು. ಇವರ ಈ ಸಕಾರಾತ್ಮಕ ಆಲೋಚನೆ ಅದೆಷ್ಟೋ ಕರೋನಾ ರೋಗಿಗಳಿಗೆ ಮನೋ ಸ್ಥೈರ್ಯ ತುಂಬುವಂತಿದೆ.