ಬೈಂದೂರು (ಮೇ, 29): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು, ಕೊಡುಗೈ ದಾನಿ ಹಾಗೂ ಸಮಾಜಸೇವಕರು ಆಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು.
ಯಾವುದೇ ಜಾತಿ-ಮತ, ಧರ್ಮ ತಾರತಮ್ಯವಿಲ್ಲದೆ ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ನಿರಂತರ ಸಮಾಜಸೇವೆ ಗೈಯುತ್ತಿರುವ ಗೋವಿಂದ ಬಾಬು ಪೂಜಾರಿ ಯವರು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಇದರ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನ ಹಾಡಿಕೆರೆ ಬೆಟ್ಟು ಕೋಟ ಶ್ರೀ ಕ್ಷೇತ್ರದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಗೌರವ ಸಲಹೆಗಾರರಾದ ಸಂತೋಷ್ ಪಡುಕರೆ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಟ್ರಸ್ಟ್ ನ ಮುಖ್ಯ ನಿರ್ವಾಹಕರಾದ ಪುಂಡಲೀಕ ಮೊಗವೀರ ಮತ್ತು ಜಯರಾಜ್ ಸಾಲಿಯಾನ್ ಪಡುಕರೆ ಉಪಸ್ಥಿತಿಯಲ್ಲಿದ್ದರು.