ಕುಂದಾಪುರ (ಮೇ, 28): ಕರೋನಾ ಲಾಕ್ಡೌನ್ ನ ಪ್ರಾರಂಭದ ದಿನಗಳಿಂದಲೂ ಅಶಕ್ತರಿಗೆ ವೈದ್ಯಕೀಯ ನೆರವು, ತುರ್ತು ಸಂದರ್ಭದಲ್ಲಿ ರಕ್ತದಾನ ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಇದೀಗ ಮಧ್ಯಾಹ್ನದ ಅನ್ನದಾಸೋಹ ಯೋಜನೆಯನ್ನು ಹಾಕಿಕೊಂಡು ಅಶಕ್ತರಿಗೆ ನೆರವಾಗಲು ಮುಂದಾಗಿದೆ.
ಕೊರೊನ ಲಾಕ್ ಡೌನ್ ಸಮಯದಲ್ಲಿ ಅಶಕ್ತ ಬಡ ದಿನಗೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಮೇ 27 ರಂದು ಸರಿಸುಮಾರು 100 ಜನರಿಗೆ ಊಟದ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಟ್ರಸ್ಟ್ ಕಲ್ಪಿಸಿದೆ. ಈ ಸಂದರ್ಭದಲ್ಲಿ ಊಟ ತಯಾರಿಸಲು ಸಹಕರಿಸಿದ ಕೋಟ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಹಾಡಿಕೆರೆ ಬೆಟ್ಟು, ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪುಂಡಲೀಕ ಮೊಗವೀರ ಮತ್ತು ಜಯರಾಜ್ ಸಾಲಿಯಾನ್, ಸಂತೋಷ್ ಪಡುಕರೆ, ಸಂತೋಷ್ ಹಾಡಿಕೆರೆ ಕೋಟ, ಸುರೇಶ್ ಮಂದಾರ್ತಿ, ಶರತ್ ಹಾಗೂ ರವಿಂದ್ರ ಉಪಸ್ಥಿತರಿದ್ದರು.
ಈ ಟ್ರಸ್ಟ್ ಮುಂದಿನ ದಿನಗಳಲ್ಲಿಯೂ ಅಶಕ್ತರಿಗೆ ಅನ್ನದಾಸೋಹದ ಮೂಲಕ ನೆರವಾಗಲು ಯೋಜನೆಯನ್ನು ಹಾಕಿಕೊಂಡಿದೆ. ನಿಮ್ಮ ಮನೆಯ ಹತ್ತಿರ ಹಾಗೂ ನಿಮಗೆ ತಿಳಿದಿರುವ ಗ್ರಾಮಗಳಲ್ಲಿ ಯಾರಿಗಾದರೂ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಿಸುತ್ತಿರುವವರು ಕಂಡುಬಂದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಹಾಗೆಯೇ ಕೊರೋನಾ ಲಾಕ್ ಡೌನ್ ಸಮಯದ ಈ ಅನ್ನದಾಸೋಹ ಯೋಜನೆಗೆ ಧನಸಹಾಯ ಮಾಡುವವರು ಕೆಳಗೆ ತಿಳಿಸಿದ ಬ್ಯಾಂಕ್ ಖಾತೆಗೆ ಸಹಾಯಧನವನ್ನು ಕಳುಹಿಸಲು ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ತಿಳಿಸಿದೆ.
Jai Kundapra Seva Trust(R)
IFSC code:- BARB0VJKMBH
Acount number:-81740100002624
Bank Name:- Bank of Baroda
Branch:- Kumbhashi
ಹೆಚ್ಚಿನ ಮಾಹಿತಿಗಾಗಿ Mb:- 8861188714 &
8970658909 – 9743470264
ಟ್ರಸ್ಟ್ ಸೇವಾ ಕಾರ್ಯ ವಿಭಾಗ