ಕರಾವಳಿ ಹಾಗೂ ಮೂಡಣ( ಪಶ್ಚಿಮಘಟ್ಟ) ಭಾಗದಲ್ಲಿ ಮುಂಗಾರು ಮಳೆ ಆರಂಭಗೊಂಡು ಹಿತವಾಗಿ ಸುರಿದಿದೆ. ಹವಾಮಾನ ವರದಿಯ ದಿನದಂತೆ ಬಂದು ತನ್ನ ಆಗಮನವನ್ನು ತೋರಿಸಿ ಜನರಲ್ಲಿ ಖುಷಿಯನ್ನು ಮೂಡಿಸಿತು.
ಭಾರತದಲ್ಲಿ ಮುಂಗಾರು ಮಳೆಗೆ ಹೆಚ್ಚಿನ ಮಹತ್ವ ಇದೆ. ಈ ಮಳೆ ಈ ವರುಷ ನಮ್ಮ ಜಿಲ್ಲೆಗೆ ಸಮಯಕ್ಕೆ ಸರಿಯಾಗಿ ಬಂದಿರುವುದು ವಿಶೇಷ. ಜೂನ್ 3 ರೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಮಳೆಯ ಜೊತೆ ಅನ್ನದಾತ ರೈತರ ಒಡನಾಟ ಬಹಳ. ಮುಂಗಾರು ಆರಂಭಕ್ಕೆ ರೈತಾಪಿ ಜನರು ಮಳೆಯನ್ನೂ ಸ್ವಾಗತಿಸುವಂತೆ ತಯಾರಾಗಿರುವುದು ನಮ್ಮ ಜಿಲ್ಲೆ ಜನರವಾಡಿಕೆ.
ಈ ವರುಷ ಮುಂಗಾರು, ಹಿಂಗಾರು ಮಳೆ ಸಾಮಾನ್ಯ ಕಿಂತಲೂ ಹೆಚ್ಚಾಗಿದ್ದು ನವೆಂಬರ್ ತನಕ ಸುರಿಯುವುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬಂದು ಬೆಳೆ ಚೆನ್ನಾಗಿ ಆಗಲಿ. ರೈತರು ಮತ್ತು ಜನತೆಯ ಮನದಲ್ಲಿ ಮಂದಹಾಸ ಮೂಡಲಿ ಎನ್ನುವುದು ನಮ್ಮ ಆಶಯ.
ಕುಂದವಾಹಿನಿ ಬಳಗ