ಉಡುಪಿ (ಜೂನ್, 06) : CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಸೈಬರ್ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ಸೈಬರ್ ಶಿಕ್ಷಾ ,ಇದು ಮೈಕ್ರೋಸಾಫ್ಟ್ ಹಾಗೂ ಡಿ.ಎಸ್.ಐ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಐಐಐಟಿ ಧಾರವಾಡ ಹಾಗೂ CySek ಕರ್ನಾಟಕದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಇಂಜಿನಿಯರಿಂಗ್ ಪದವಿ ಪಡೆದಿರುವ ಮಹಿಳಾ ಪದವೀಧರರಲ್ಲಿ ಸೈಬರ್ ಸೆಕ್ಯೂರಿಟಿಗೆ ಸಂಭಂದಿಸಿದ ಕೌಶಲ್ಯಗಳನ್ನು ಹೆಚ್ಚಿಸುವ ಸಲುವಾಗಿ ನಾಲ್ಕು ತಿಂಗಳ ಉಚಿತ ಪೂರ್ಣಾವಧಿ ಕೋರ್ಸನ್ನು ಜುಲೈ ತಿಂಗಳಿನಿಂದ ಹಮ್ಮಿಕೊಳ್ಳಲಾಗುತ್ತಿದೆ.
ಆಸಕ್ತ ಮಹಿಳಾ ಪದವೀಧರರು ಜೂನ್ 10 ರ ಒಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.
ಐಐಐಟಿ ಧಾರವಾಡ ಹಾಗೂ CySeck ಸೈಬರ್ ಸೆಕ್ಯೂರಿಟಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ Microsoft & DSCI’s Cybershikshaa ನಾಲ್ಕು ತಿಂಗಳ ಪೂರ್ಣಾವಧಿ ಉಚಿತ ಕೋರ್ಸನ್ನು ಪ್ರಾರಂಭಿಸಲಾಗಿದೆ.
ಸೈಬರ್ ಸೆಕ್ಯೂರಿಟಿ ಶಿಕ್ಷಣ ಯೋಜನೆಯಡಿ ಈ ಕೋರ್ಸನ್ನು ಹಮ್ಮಿಕೊಂಡಿದ್ದು, ಸೈಬರ್ ಶಿಕ್ಷಣದಲ್ಲಿ ಮಹಿಳಾ ಪದವೀಧರರಲ್ಲಿ ಆಸಕ್ತಿ ಮೂಡಿಸಲು ಹಾಗೂ ಉದ್ಯೋಗಾವಕಾಶಗಳನ್ನು ರೂಪಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಬಿ.ಟೆಕ್. ಹಾಗೂ ಬಿ.ಇ. ಮುಗಿಸಿದ ಮಹಿಳಾ ಪದವೀಧರರು ಸೈಬರ್ ಸೆಕ್ಯೂರಿಟಿ ತರಬೇತಿ ಕೋರ್ಸಗೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
Registration Click here
More Details https://www.dsci.in/cyber-shikshaa/