ಉಡುಪಿ (ಜೂ, 10): ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನಗಳು ಹಲವಾರು ಇದೆ. ಆಯಾಯ ಗ್ರಾಮಗಳ ದೈವ ಸ್ಥಾನದಲ್ಲಿ ದೈವ ಚಾಕ್ರಿ ಮಾಡುವ ವರ್ಗಗಳು ಹಲವು ವರ್ಷಗಳಿಂದ ದೈವಾರಾಧನೆಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ
ಈ ಕರೋನಾ ಮಹಾಮಾರಿಯಿಂದಾದ ದೀರ್ಘಾವಧಿಯ ಲಾಕ್ಡೌನ್ನಿಂದಾಗಿ ಧಾರ್ಮಿಕ ಕ್ಷೇತ್ರಗಳ ಉತ್ಸವ, ಜಾತ್ರೆ, ವಾರ್ಷಿಕೋತ್ಸವಗಳನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಸರ್ಕಾರ ರದ್ದು ಮಾಡಿದೆ. ಆದರೆ ಇದು ದೈವ ಚಾಕ್ರಿ ಸದಸ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರಿದ್ದು. ಈ ವರ್ಗ ತುಂಬಾ ಸಂಕಷ್ಟದಲ್ಲಿದೆ.
ತುಳುನಾಡಿನ ದೈವ ಚಾಕ್ರಿ ವರ್ಗದವರಿಗೆ ಈ ಬಾರಿಯ ಹಾಗೂ ಕಳೆದ ವರ್ಷದ ಕೋವಿಡ್ ಪ್ಯಾಕೇಜಿನ ಪಟ್ಟಿಯಲ್ಲಿ ಸರ್ಕಾರ ಕೈಬಿಟ್ಟಿದೆ. ಹಲವಾರು ಬಾರಿ ಮನವಿ ಕೊಟ್ಟು ಸೋತು ಹೋಗಿದ್ದೇವೆ. ಕರಾವಳಿಯಲ್ಲಿ ಹಲವಾರು ವರ್ಗಗಳು ದೈವಾರಾಧನೆ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಧ್ಯಸ್ಥರು, ಮುಕ್ಕಾಲ್ದಿ ದರ್ಶನ ಪಾತ್ರಿಗಳು, ಮಡಿವಾಳರು, ನಾಗಸ್ವರ ವಾದಕರು, ಬ್ಯಾಂಡ್ ವಾದಕರು, ಡೋಲಿನವರು, ಕೊರಗ ಸಮುದಾಯ, ಪಂಬದ ಸಮುದಾಯ, ನಲಿಕೆ ಸಮುದಾಯ, ಪರವ ಸಮುದಾಯ, ಬಬ್ಬು ಸ್ವಾಮಿ ಕೂಡುಕಟ್ಟು, ಗರಡಿ ಕೂಡುಕಟ್ಟು, ಹೀಗೆ ಹಲವಾರು ವರ್ಗಗಳಿವೆ.
ದಯಮಾಡಿ ಇವರ ಪರವಾಗಿ ಸರ್ಕಾರ ಮೂರನೇ ಪ್ಯಾಕೇಜ್ ಘೋಷಣೆ ಮಾಡಬೇಕಾಗಿ ಹಾಗೂ ಮುಂದಿನ ದಿನಗಳಲ್ಲಿ ದೈವಾರಾಧನೆಗೆ ಅತಿ ಶೀಘ್ರದಲ್ಲಿ ನಡೆಸಲು ಅನುಮತಿ ಕೊಡಬೇಕಾಗಿ ಮುಖ್ಯಮಂತ್ರಿಗಳಿಗೆ, ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಮನವಿ ಮಾಡಿ ಕೇಳಿಕೊಳ್ಳುತ್ತೇನೆ.
ಮಹೇಶ್ ಪೂಜಾರಿ ಹೂಡೆ
ಅಧ್ಯಕ್ಷರು
ಉಡುಪಿ ಹೆಲ್ಪ್ ಲೈನ್ (ರಿ)