ಕುಂದಾಪುರ (ಜೂ, 10): ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ “ಗುರು ಗೌರವ” ಎನ್ನುವ ಶೀರ್ಷಿಕೆಯಡಿಯಲ್ಲಿ ವೇತನವಿಲ್ಲದ, ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯ ತನಕ ಸುಮಾರು 13000 ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಯುವಾಬ್ರಿಗೇಡ್ ಕುಂದಾಪುರ ತಂಡದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನಾ ಕಾರಣದಿಂದ ಶಾಲೆಗಳು ನಡೆಯದೆ, ಅನೇಕ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಗುರುತಿಸಿ , ಸರಿ ಸುಮಾರು 100ಕ್ಕೂ ಅಧಿಕ ಖಾಸಗಿ ಶಾಲಾ ಶಿಕ್ಷಕರಿಗೆ ಜೂನ್ 9 ರಂದು ರೇಷನ್ ಕಿಟ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಯುವಾಬ್ರಿಗೇಡ್ ನ ಕಾರ್ಯಕರ್ತರಾದ ನಿರಂಜನ್ ತಲ್ಲೂರು, ವಿನೋದ್ ಕುಂದಾಪುರ, ಪ್ರಮೋದ್ ಶಂಕರನಾರಾಯಣ, ಗುರು ಖಾರ್ವಿ, ಆಕಾಶ್ ಹಾಗೂ ಇನ್ನಿತರರು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.