ಚಿತ್ರದುರ್ಗ (ಜೂ, 11) : ಕರೋನ ಮಹಾಮಾರಿ ಎರಡನೇ ಅಲೆ ತಡೆಗಟ್ಟುವ ಸಲುವಾಗಿ ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲೆ ಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದ್ದು, ನಗರದಲ್ಲಿ ವ್ಯಾಕ್ಸಿನ್ ಸಹಾಯವಾಣಿ Vaccine Helpline 24*7 ನ್ನು ನಿರ್ದೇಶಕರಾದ ಶ್ರೀ ಯು ಸಿ ಗಿರೀಶ್ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.
ಸಾರ್ವಜನಿಕರಿಗೆ ಕೋವಿಡ್ -19 ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಾ, ಲಸಿಕಾ ಕೇಂದ್ರಗಳ ಕುರಿತು ಮಾಹಿತಿ ನೀಡುತ್ತಾ, ಲಸಿಕೆ ಹಾಕಿದನಂತರ ಸರ್ಟಿಫಿಕೇಟ್ ಡೌನ್ಲೋಡ್ ಮಾಡಿ ಜನರಿಗೆ ತಲುಪುವ ನಿಟ್ಟಿನಲ್ಲಿ ಕಾರ್ಯವನ್ನು ಚಿತ್ರದುರ್ಗ ರೆಡ್ ಕ್ರಾಸ್ ಪರವಾಗಿ ಶ್ರೀ ಯು ಸಿ ಗಿರೀಶ್ ಹಾಗೂ ತಂಡ ನಿರ್ವಹಿಸುತ್ತಿದ್ದಾರೆ.
ಜೂನ್ 11 ರಂದು ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತು ಖಜಾಂಚಿ ಅರುಣ್ ಕುಮಾರ್ ರವರು ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.