ಗಂಗೊಳ್ಳಿ (ಜೂ, 12): ಬೈಂದೂರು ಶಾಸಕ ಶ್ರೀ. ಬಿ.ಎಂ.ಸುಕುಮಾರ್ ಶೆಟ್ಟಿ ಗಂಗೊಳ್ಳಿ ಗ್ರಾಮಕ್ಕೆ ಗ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು.
ಕೋವಿಡ್ ನಿಯಂತ್ರಣಕ್ಕೆ 50 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಇರುವ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಜೂ.10 ರಿಂದ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು, ಉತ್ತಮ ರೀತಿಯಲ್ಲಿ ಲಾಕ್ಡೌನ್ ವ್ಯವಸ್ಥೆ ಮಾಡಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್ ಕೈಗೊಂಡ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು, ಅನ್ಲಾಕ್ ಆದ ಬಳಿಕ ಜನರು ಮೈಮರೆಯದೆ ಕಾಲಕಾಲಕ್ಕೆ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಕರೋನಾ ನಿಯಂತ್ರಣದಲ್ಲಿ ಹಗಲಿರುಳು ದುಡಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳ ಹಾಗೂ ಎಲ್ಲಾ ಕರೋನಾ ವಾರಿಯರ್ಗಳ ಕಾರ್ಯ ಶ್ಲಾಘನೀಯ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಸರಕಾರ ಪರಿಹಾರದ ಪ್ಯಾಕೇಜ್ ಘೋಷಿಸಿದ್ದು ಪ್ಯಾಕೇಜ್ ಪಡೆಯಲು ಅರ್ಹವಾಗಿರುವ ಎಲ್ಲಾ ವರ್ಗದ ಜರು ಜೂ.14 ರೊಳಗಾಗಿ ಸೇವಾಸಿಂಧುವಿನಲ್ಲಿ ಹೆಸರು ನೊಂದಾಯಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಬಿ.ರಾಘವೇಂದ್ರ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಸಾವಿತ್ರಿ ಖಾರ್ವಿ, ಪ್ರಶಾಂತ ಖಾರ್ವಿ, ನಿರ್ಮಲಾ ಪೂಜಾರಿ, ಶಾಂತಿ ಖಾರ್ವಿ, ಅಕ್ಕಮ್ಮ, ಆಶಾ ಕಾರ್ಯಕರ್ತೆಯರಾದ ಕಲ್ಪನಾ ಶೇರುಗಾರ್, ಭಾಗ್ಯ, ಪಂಚಾಯತ್ ಸಿಬ್ಬಂದಿ ಶೇಖರ ಜಿ., ಉದಯ ಜಿ., ರಾಘವೇಂದ್ರ, ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫೆರ್ನಾಂಡಿಸ್, ರೇಖಾ ಖಾರ್ವಿ, ಸಹನಾ, ಸಂಗೀತಾ, ಬಿಜೆಪಿ ಮುಖಂಡ ನಾರಾಯಣ ನಾಯಕ್, ಪೊಲೀಸ್ ಸಿಬ್ಬಂದಿ ಸರೋಜಾ, ಗೃಹರಕ್ಷಕ ದಳದ ಸಿಬ್ಬಂದಿ ಪ್ರತಿಮಾ ಉಪಸ್ಥಿತರಿದ್ದರು.