ಯುವ ಸಾಹಿತಿ ಕಿಗ್ಗಾಲು ಜಿ. ಹರೀಶ್ ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರು. ಮೂರ್ನಾಡುವಿನ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಈಗಾಗಲೇ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರ ರಾಯರ ತೋಟ ಎಂಬ ಲಲಿತ ಪ್ರಬಂಧಗಳ ಸಂಕಲನ 2011 ರಲ್ಲಿ ಬಿಡುಗಡೆಯಾಗಿದೆ.
ಕಥೆ,ಕವನ ,ಲೇಖನ ರಚನೆಯ ಜೊತೆಗೆ ವರದಿಗಾರಿಕೆಯನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ಶಕ್ತಿ ದಿನಪತ್ರಿಕೆಯಲ್ಲಿ, ಸುಧಾ, ತುಷಾರ, ಕರ್ಮವೀರ, ನಗೆಮುಗುಳು, ಅನಂತ ಪ್ರಕಾಶ ಹೀಗೆ ವಿವಿಧ ನಿಯತಕಾಲಿಕೆಗಳಲ್ಲಿ ಇವರ ಬರಹ ಪ್ರಕಟವಾಗಿದೆ. ಮೂರ್ನಾಡು ಹೋಬಳಿ ಜನಪದ ಪರಿಷತ್ತಿನ ಕಾರ್ಯದರ್ಶಿಯಾಗಿರುವ ಇವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ರಚಿಸಿರುವ ಬಟ್ಟೆ ಬಿಚ್ಚಿಟ್ಟ ಟಿಟ್ಟೆ ಎಂಬ ಹೆಸರಿನ ಹಾಯ್ಕು ಎಂಬ ಜಪಾನ್ ಮಾದರಿ ಕಾವ್ಯಗಳ ಸಂಕಲನ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಾರಣ, ಪ್ರವಾಸ, ಪ್ರಾಚೀನ ವಸ್ತುಗಳ ಸಂಗ್ರಹ ಇವರ ಹವ್ಯಾಸ.
ಪ್ರಾರಂಭಗೊಂಡ ಕಿರುಅವಧಿಯಲ್ಲಿಯೇ ಓದುಗರಿಂದ ಮೆಚ್ಚುಗೆಯನ್ನು ಪಡೆದ ಕುಂದಾಪುರದ ನೂತನ ಅಂತರ್ಜಾಲ ಸುದ್ದಿತಾಣ “ಕುಂದವಾಹಿನಿ” ಯಲ್ಲಿ ಸಾಹಿತ್ಯಾಸಕ್ತ ಮನಸ್ಸುಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿರುವುದಕ್ಕೆ ಯುವ ಸಾಹಿತಿ ಕಿಗ್ಗಾಲು ಜಿ. ಹರೀಶ್ ರವರು ಸಂತೋಷ ವ್ಯಕ್ತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಿಗ್ಗಾಲು ಜಿ. ಹರೀಶ್ ರವರ ಲೇಖನ ಹಾಗೂ ಕವನಗಳನ್ನು ನಿಮಗೆ ಎಳೆ ಎಳೆಯಾಗಿ ಉಣ ಬಡಿಸುವ ಪ್ರಯತ್ನ ಮಾಡಲಿದ್ದೇವೆ…..
ಕುಂದವಾಹಿನಿ ಬಳಗ