ಶಂಕರನಾರಾಯಣ( ಮೇ,16): ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಪ್ರೌಢ ಶಾಲಾ ವಿಭಾಗದ 1990ನೇ ಸಾಲಿನ ಎಸ್ .ಎಸ್ .ಎಲ್. ಸಿ .ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮವು ಕಾಲೇಜಿನ ಶ್ರೀ ಸುಬ್ರಹ್ಮಣ್ಯ ಜೋಯಿಷ ಸುವರ್ಣ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು.
ಸುಮಾರು 45ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂದಿನ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಗೋಪಾಲ್ ಶೆಟ್ಟಿಗಾರ್ , ಶ್ರೀ ವಾಸುದೇವ ಉಡುಪ ಮತ್ತು ಕಾಲೇಜು ವಿಭಾಗದ ಶ್ರೀಯುತ ಕರುಣಾಕರ ಶೆಟ್ಟಿ, ಶ್ರೀ ಶಿವಕುಮಾರ್ ಗಂಗೂರ್, ಶ್ರೀಯುತ ರಾಜಾರಾಮ್ ಪಾಟೀಲ್, ಶ್ರೀ ನಾಗೇಶ್ ಶಾನುಭೋಗ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
1990ರ ಎಸ್. ಎಸ್ .ಎಲ್. ಸಿ ಮುಗಿಸಿದ ಸಮಾನ ಮನಸ್ಕರು ಕಟ್ಟಿಕೊಂಡ ವಾಟ್ಸಪ್ ಬಳಗವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ 1990 ಮೊದಲ ಮತ್ತು 1990ರ ನಂತರದ ಕೆಲವು ಹಳೆ ವಿದ್ಯಾರ್ಥಿಗಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಕುಮಾರಿ ಸಾಯಿಶ್ರುತಿ ಪಿಲಿಕಜೆ ಇವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮವಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಹಳೆ ವಿದ್ಯಾರ್ಥಿಗಳು ಸುಮಾರು 33 ವರ್ಷಗಳ ನಂತರ ತಮ್ಮದೇ ಕಾಲೇಜಿನ ಪರಿಸರದಲ್ಲಿ ಮತ್ತೆ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯ ಶಿಕ್ಷಕರಿಗೆ ಗುರುವಂದನೆ ನೀಡಿದ ಕಾರ್ಯಕ್ರಮ ಶಂಕರನಾರಾಯಣದ ಇತಿಹಾಸದಲ್ಲಿ ಇದು ಪ್ರಥಮವಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ಎಲ್ ಸಿ 1990 ಸಮಾನ ಮನಸ್ಕರ ವಾಟ್ಸಾಪ್ ಬಳಗದ ಎಡ್ಮಿನ್ ಗಳಲ್ಲಿ ಓರ್ವರೂ ವೃತ್ತಿಯಲ್ಲಿ ವಕೀಲರಾದ ಶ್ರೀ ಯೋಗೇಂದ್ರ ನಾಯ್ಕ್ ವಹಿಸಿದ್ದರು . ಇನ್ನೋರ್ವ ಎಡ್ಮಿನ್ ನಾಗರಾಜ್ ತಲ್ಲಂಜೆ ಮತ್ತು ಮಹಿಳಾ ಎಡ್ಮಿನ್ ಜಯಂತಿ ಐರೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು .ವಿಜಯಲಕ್ಷ್ಮೀ ಸೋಮಯಾಜಿ ಪ್ರಾರ್ಥಿಸಿ,ಚಂದ್ರಶೇಖರ ಹೆಗ್ಡೆ ಕಲ್ಗದ್ದೆ ಸ್ವಾಗತಿಸಿ ,ಸುಭಾಷ್ ಚಂದ್ರ ರಾವ್ ವಂದಿಸಿದರು. ಹಲವು ವರ್ಷಗಳ ಬಳಿಕ ಪುನರ್ಮಿಲನ ಗೊಂಡ ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ ಎನ್ನುವಂತೆ ಗುರು ಶಿಷ್ಯ ಮತ್ತು ಕುಟುಂಬಸ್ಥರ ಸಹಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.