ಪ್ರೀತಿಯ ಬಂಧು ಮಿತ್ರರೇ,
ನಾನು ನಿಮ್ಮ ಗೋವಿಂದ ಬಾಬು ಪೂಜಾರಿ.
ಕರೋನದಿಂದ ಇಡೀ ಜಗತ್ತೇ ತತ್ತರಿಸಿದೆ. ಕಳೆದ ಎರಡು ವರ್ಷಗಳಿಂದ ಕರೋನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವವರನ್ನು ಗುರುತಿಸಿ ಆಹಾರದ ಕಿಟ್ ಗಳನ್ನು ಅವರವರ ಗ್ರಾಮಕ್ಕೆ ಇಂತಿಷ್ಟು ಎಂದು ನನ್ನ ಕೈಲಾದಷ್ಟು ಸ್ವತಃ ನಾನೇ ಗ್ರಾಮಗಳಿಗೆ ಭೇಟಿ ನೀಡಿ ಕಿಟ್ ಹಸ್ತಾಂತರಿಸಿದ್ದೇನೆ. ಯಾವುದೇ ಜಾತಿ, ಮತ, ಧರ್ಮ, ರಾಜಕೀಯ ಭೇದಭಾವ ಇಲ್ಲದೆ ಎಲ್ಲಾ ವರ್ಗದವರನ್ನು ಸಮಾನರಂತೆ ಪರಿಗಣಿಸಿ ಬೈಂದೂರು ಭಾಗದ ಮೂಲೆ -ಮೂಲೆಗೆ ನಾನೇ ಖುದ್ದಾಗಿ ಸಂಚರಿಸಿ ನನ್ನ ಕೈಲಾದಷ್ಟು ಸೇವೆಯನ್ನು ಮಾಡಿದ್ದೇನೆ.
ಸಣ್ಣಗ್ರಾಮಗಳಿಗೆ ಕಡಿಮೆ, ದೊಡ್ಡ ಗ್ರಾಮಗಳಿಗೆ ಹೆಚ್ಚು ಎಂಬಂತೆ ಆಯ್ದ ಕುಟುಂಬಗಳಿಗೆ ಆಹಾರ ಕಿಟ್ ನೀಡಿ ನಿಮ್ಮ ಹಸಿವನ್ನು ನೀಗಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ ಎನ್ನುವ ಸಂತೃಪ್ತಿ ನನಗೆ ಇದೆ. ಕೆಲವು ಕಡೆ ಕಿಟ್ ವಿತರಣೆ ತಪ್ಪಿಹೋಗಿದ್ದರೆ ಕ್ಷಮಿಸಿ, ಮುಂದೆ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಇನ್ನೂ ಹೆಚ್ಚು ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ನನ್ನ ಈ ಸಮಾಜ ಮುಖಿ ಕೆಲಸಕ್ಕೆ ಸಹಕರಿಸಿದ, ಎಲ್ಲಾ ನನ್ನ ಸಹೋದರ ಬಂಧು ಮಿತ್ರರು, ಅಭಿಮಾನಿ ವರ್ಗದವರು, ನನ್ನ ಹಿತೈಷಿಗಳು, ಊರ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು, ಮತ್ತು ಅಧ್ಯಕ್ಷರು, ತಮಗೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.
ಸರ್ವಜನೋ ಸುಖಿನೋ ಭವಂತುಃ
ಗೋವಿಂದ ಬಾಬು ಪೂಜಾರಿ