ಯಾರು ಎಂದು ಕೆತ್ತದ
ಅರ್ಥಹೀನ ಶಿಲೆಯಾಗದಂತಹ
ಯಾರೆಷ್ಟೇ ಚುಚ್ಚಿದರು
ಕಿಂಚಿತ್ತೂ ನೋವಾಗದಂತಹ
ಯೋಗ್ಯತೆ ಇಲ್ಲದವರ
ಸ್ಪರ್ಶಕ್ಕೆ ಸಂಕುಚಿತವಾಗದಂತಹ
ಕಂಡ ಕಂಡವರ ಕಾಲ ಧೂಳಿಗೆ
ಮಾಸಿ ಮಸುಕಾಗದಂತಹ
ಕಳಸದ ಬಳಿ ಇಟ್ಟರು ಸರಿ
ಮೆಟ್ಟಿಲ ಬಳಿ ಇಟ್ಟರು ಸರಿ
ಹಿಗ್ಗದೆ ಕುಗ್ಗದೆ ಸಮಚಿತ್ತದಿಂದಿರುವಂತಹ
ಕಲ್ಲಾಗಬೇಕಿತ್ತು ನಾನು
ನೋವು ದುಃಖಗಳ ನೀಡುವ
ವಿಷಯದಲ್ಲಾದರೂ ಅರೆಕ್ಷಣ
ಕನಿಷ್ಠ ಮನಸಾದರೂ
ಕಲ್ಲಾಗಬೇಕಿತ್ತು.
-ಸುಶ್ಮಿತಾ ನೇರಳಕಟ್ಟೆ