ಕುಂದಾಪುರ(ಡಿ.31): ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಡಿಸೆಂಬರ್ 26 ರಂದು ವಿಜೃಂಭಣೆಯಿಂದ ನಡೆಯಿತು.
ಶ್ರೀ ದೇವರಿಗೆ ಬೆಳಿಗ್ಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಸಮಾರಾಧನೆ, ಕೃಚ್ಚಾಚರಣೆ, ಮಹಾಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ್ತ ಅಯುತ ಸಂಖ್ಯಾತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ತತ್ವ ಕಲಶ ಸ್ಥಾಪನೆ, ತತ್ವಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, ಪಂಚವಿಂಶತಿ ದ್ರವ್ಯ ಕಲಶಸ್ಥಾಪನೆ, ಪ್ರಧಾನ ಅಧಿವಾಸ ಹೋಮ, ಗಾಯತ್ರಿ ಕಲಶ ಸ್ಥಾಪನೆ, ಗಾಯತ್ರಿ ಜಪ, ಚತುರ್ವೇದ ಪಾರಾಯಣ ಕಲಶಾಭಿಷೇಕ, ಕಲ್ಲೋಕ್ತ ಮಹಾಪೂಜೆ, ದಶದಾನ, ನವಗ್ರಹ ಹೋಮ, ವಟು-ಬ್ರಾಹ್ಮಣ ಆರಾಧನೆ, ಸುಹಾಸಿನಿ ಪೂಜೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಮಹಾ ಮಂಗಳಾರತಿ, ನಾಗಸಂದರ್ಶನ, ಪಲ್ಲಪೂಜೆ, ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಮಧ್ಯಾಹ್ನ 12ರ ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆಡೆಯಿತು. ಸಂಜೆ ಹಾಲಿಟ್ಟು ಸೇವೆ, ಚತುಃಪವಿತ್ರ ನಾಗಮಂಡಲ ಸೇವೆಯನ್ನು ನೋಡಲು ರಾಜ್ಯದ ವಿವಿಧ ಕಡೆಯಿಂದ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ವಿದ್ಯುತ್ ದೀಪಲಂಕಾರ ಹೂವಿನ ಅಲಂಕಾರ ನಾಗಮಂಡಲಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ. ಭವ್ಯ ಮೆರವಣಿಗೆ ಮೂಲಕಹೊರೆಕಾಣಿಕೆಯನ್ನು ಸಾನಿಧ್ಯಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿಕಲ್ತ್ತೋಡ್ಮಿ ಮನೆಯವರು ಮತ್ತು ಕುಟುಂಬಸ್ಥರು,ಊರಿನ ಸಮಸ್ತ ಗ್ರಾಮಸ್ಥರು, ಹಿತೈಷಿಗಳು ಹಾಗೂ ಊರ-ಪರವೂರ ಭಕ್ತ ಮಹನೀಯರು ಉಪಸ್ಥಿತರಿದ್ದರು.