ವಂಡ್ಸೆ (ಜೂ, 24) : ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿಯಾದ ಆರ್ಟಿಕಲ್ 370 ಬಗ್ಗೆ ಮೊದಲು ಧ್ವನಿ ಎತ್ತಿದವರು ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರು. ಇವರ ಪ್ರಯತ್ನದ ಫಲವಾಗಿ ಜನಸಂಘದ ರಚನೆಯಾಯಿತು. ಇವರು ಬಿತ್ತಿದ ರಾಷ್ಟ್ರೀಯತೆ ಮತ್ತು ಭಾರತೀಯತೆಯ ಗುಣಗಳಿಂದಾಗಿ ಇಂದು ನಮ್ಮ ಬಿಜೆಪಿ ಪಕ್ಷ ವಿಶ್ವದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದರು.
ಉದಾತ್ತ ಕಾರಣಗಳಿಗಾಗಿ ಹುತಾತ್ಮರಾದ ಶ್ಯಾಮಪ್ರಸಾದ್ ಮುಖರ್ಜಿಯವರು ಎಂದೆಂದಿಗೂ ಸ್ಮರಣೀಯರು ಎಂದು ನುಡಿದ ಶಾಸಕ ಬಿ ಎಂ ಸುಕುಮಾರ ಶೆಟ್ಟಿ, ಜೂನ್, 23 ರಂದು ತಮ್ಮ ನಿವಾಸದಲ್ಲಿ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ನುಡಿನಮನ ಸಲ್ಲಿಸಿದರು.