ನಾ ನಿನಗೆ ಮತ್ತೆ ನೆನಪಾದರೆ….?
ನಿನ್ನೊಳಗೆ ನಾ ಕಳೆದು ಹೋದೆ
ಕಾಣೆಯಾದವರ ಪಟ್ಟಿಯಲ್ಲಿ
ಮರೆಯದೆ ಸೇರಿಸಿಕೋ ನನ್ನನ್ನು
ಯಾರಾದರೂ ನಿನ್ನಲ್ಲಿ ವಿಳಾಸ ಹುಡುಕುವಳು ಬಂದರೆ ಕೊಟ್ಟುಬಿಡು ನನ್ನ ಕೇರಾಫ್ ಅಡ್ರೆಸ್
ವಿರಸ ಮರೆತು ನನ್ನ ಹೃದಯಕೊಂದು ಸ್ವತಂತ್ರ ಕೊಟ್ಟುಬಿಡು
ಪಾಪ ಬದುಕಲಿ ಬಿಡು, ಬಡ ಜೀವ
ಮನಸು ಮಲ್ಲಿಗೆ ….ಗೊತ್ತಾಯಿತು ಬಿಡು!
ನೀ ಯಾರದೋ ಸುಖದ ಅಮಲಿನಲ್ಲಿ ತೇಲಾಡುವ ಮಾದಕ ಪರಿಮಳದ ಕೆಂಡ ಸಂಪಿಗೆ
ಮತ್ತೆ ನೆನಪಾದರೆ ಕೊಟ್ಟು ಬಿಡು ಒಂದು ತಪ್ಪಿದ ಕರೆಯಾದರು…
ಬಂದು ಬಿಡುವೆ ನಿನ್ನ ಸುಮಧುರ ಕನಸಿನಲ್ಲಾದರೂ…!
ಕಲ್ಪನೆ: ಈಶ್ವರ ಸಿ ನಾವುಂದ